‘ಆವಿಷ್ಕಾರ’ ಕೃತಿಯು ಸಂತೋಷ್ ರಾವ್ ಪೆರ್ಮುಡ ಅವರ ನವೀನ ತಂತ್ರಜ್ಞಾನಗಳ ಕಿರುಪರಿಚಯ ಕೃತಿಯಾಗಿದೆ. ಕೃತಿಯ ಬೆನ್ನುಡಿಯಲ್ಲಿ, ತಂತ್ರಜ್ಞಾನವು ಒಂದು ಜೀವಜಾತಿಯ ವ್ಯಾಪ್ತಿಯಲ್ಲಿರುವ ಉಪಕರಣಗಳು ಹಾಗೂ ಕೌಶಲಗಳ ಬಳಕೆ ಮತ್ತು ಜ್ಞಾನಕ್ಕೆ ಸಂಬಂಧಿಸಿರುವ, ಮತ್ತು ಒಂದು ಪರಿಸರವನ್ನು ನಿಯಂತ್ರಿಸಲು ದೇವಜಾತಿಯ ಹಾಗೂ ಅದಕ್ಕೆ ಹೊಂದಿಕೊಳ್ಳಲು ಜೀವಜಾತಿಯ ಸಾಮರ್ಥ್ಯದ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ತಿಳಿಸುವ ಒಂದು ವಿಶಾಲವಾದ ಪರಿಕಲ್ಪನೆಯಾಗಿದೆ. ಆದರೆ, ಅದಕ್ಕೆಒಂದು ನಿಖರವಾದ ವ್ಯಾಖ್ಯಾನ ನೀಡಲು ಸಾಧ್ಯವಿಲ್ಲ; ತಂತ್ರಜ್ಞಾನವು ಮಾನವಕುಲಕ್ಕೆ ಉಪಯುಕ್ತ ವಾಗಿರುವ ವಿವಿಧ ಯಂತ್ರಗಳು, ಯಂತ್ರಾಂಶ ಅಥವಾ ಗೃಹೋಪಕರಣಗಳಂತಹ ಭೌತಿಕ ವಸ್ತುಗಳನ್ನು ನಿರ್ದೇಶಿಸಬಹುದು, ಆದೇ ರೀತಿ, ವ್ಯವಸ್ಥೆಗಳು, ಸಂಘಟನೆಯ ವಿಧಾನಗಳು ಮತ್ತು ತಂತ್ರಗಳ ಸಹಿತ ಹೆಚ್ಚು ವಿಶಾಲವಾದ ವಿಷಯಗಳನ್ನೂ ಒಳಗೊಳ್ಳಬಹುದಾಗಿದೆ. 'ಅನ್ವೇಷಣೆ' ನನ್ನ ಐದನೇ ಪುಸ್ತಕವಾಗಿದ್ದು, ಇದರಲ್ಲಿ, ಪ್ರಾಪಂಚಿಕ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದಿರುವ ಮತ್ತು ಮುಂದಕ್ಕೆ ಹೆಚ್ಚು ಬಳಕೆಗೆ ಲಭ್ಯವಾಗಲಿರುವ ಸುಮಾರು 26 ವೈವಿಧ್ಯಮಯ ತಂತ್ರಜ್ಞಾನಗಳನ್ನು ಪರಿಚಯಿಸುವ ಪ್ರಯತ್ನವನ್ನು ಮಾಡಿದ್ದೇನೆ. ಇದರಲ್ಲಿರುವ ಕೆಲವೊಂದು ತಂತ್ರಜ್ಞಾನಗಳು ಈಗಾಗಲೇ ನಮ್ಮ ದೇಶದಲ್ಲಿ ಅನುಷ್ಠಾನವಾಗಿದ್ದರೆ, ಇನ್ನುಳಿದವುಗಳು ವಿದೇಶಗಳಲ್ಲಿ ಈಗಾಗಲೇ ಬಳಕೆಯಲ್ಲಿದ್ದು, ನಮ್ಮಲ್ಲಿ ಮುಂದಿನ ದಿನಗಳಲ್ಲಿ ಬಳಕೆಗೆ ಲಭ್ಯವಾಗಲಿರುವವುಗಳು, ಇದರಲ್ಲಿ ವಿಭಿನ್ನ ರೀತಿಯ ಸಾರಿಗೆ, ವಾಹನಗಳು, ಕೃಷಿ ಉಪಕರಣಗಳು, ಇಂಧನ ಮಿತವ್ಯಯ, ಪರಿಸರ ಸಂಬಂಧಿತ, ದೇಶವರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ಪರಿಚಯಿಸುವ ಕಿರು ಪ್ರಯತ್ನವನ್ನು 'ಅನ್ವೇಷಣೆ' ಪುಸ್ತಕದಲ್ಲಿ ಮಾಡಿದ್ದೇನೆ' ಎಂದು ಲೇಖಕರು ಹೇಳಿದ್ದಾರೆ.
©2024 Book Brahma Private Limited.