ʼಅಗೋಚರ ಜಾಲʼ ಲೇಖಕ ವಿಶ್ವಾಸ್ ಭಾರದ್ವಜ್ ಅವರು ಅನುವಾದಿಸಿದ ಕೃತಿ.ಜೋತ್ಸ್ನಾ ಕಾಸು ಅವರು ಮೂಲ ಲೇಖಕರು. ತಂತ್ರಜ್ಞಾನದ ಕ್ರಾಂತಿಯ ಕುರಿತ ವಿಷಯ ವಸ್ತುವನ್ನು ಒಳಗೊಂಡಿದೆ. ನಾವಿಂದು ಅತ್ಯಂತ ಸೂಕ್ಷ ಪದರದಲ್ಲಿ ಡಿಜಿಟಲ್ ಜೀವನ ಕ್ರಮ ನಡೆಸುತ್ತಿದ್ದೇವೆ. ತಂತ್ರಜ್ಞಾನ ನಮ್ಮ ಬದುಕನ್ನು ಸುಲಭವಾಗಿಸಿದೆ. ಆದರೆ ಅಷ್ಟೇ ಅಪಾಯಕಾರಿಯಾಗಿದೆ ಎನ್ನುವುದರ ವಿಚಾರಗಳು ಇಲ್ಲಿ ಕಾಣಬಹುದು. ನಮಗೆ ಗೊತ್ತಿರುವುದು ಒಂದು ವೈರಸ್ ಮತ್ತು ಅದಕ್ಕೊಂದು ಆಂಟಿ ವೈರಸ್. ಆದರೆ ನಮ್ಮ ಕಲ್ಪನೆಗೆ ನಿಲುಕದ ಅದೆಷ್ಟೋ ವಿಚಾರಗಳು ಸೈಬರ್ ದಾಳಿಯಲ್ಲಿದೆ. ಇವತ್ತಿನ ಡಿಜಿಟಲ್ ಯುಗದಲ್ಲಿ ನಿಜವಾದ ಶತ್ರು ಮಾಲ್ ವೇರ್ ದಾಳಿಕೋರ, ಹ್ಯಾಕರ್ ರೂಪದಲ್ಲಿರುವ ವಂಚಕ ನಮ್ಮ ಕಣ್ಣಿಗೆ ಕಾಣುವುದಿಲ್ಲ: ಆದರೆ ಅವನು ನೀಡುವ ಆಘಾತ ಮಾತ್ರ ನಮ್ಮ ಬದುಕಿನ ನೆಮ್ಮದಿಯನ್ನೇ ಶಾಶ್ವತವಾಗಿ ಕಿತ್ತುಕೊಳ್ಳಬಹುದು. ಈ ನಿಟ್ಟಿನಲ್ಲಿ ಸೈಬರ್ ಸೆಕ್ಯೂರಿಟಿ ಆಯಾಮಕ್ಕೆ ಸಂಬಂಧಿಸಿದ ಒಂದಷ್ಟು ಸಾಮಾನ್ಯ ತಿಳಿವಳಿಕೆಗಳು, ಎದುರಾಗುವ ಅಪಾಯ, ದಾಳಿಕೋರರ ಹುನ್ನಾರ, ಬಳಸುವ ಸುರಕ್ಷಾ ಕ್ರಮ , ಅಳವಡಿಸಬೇಕಾದ ಎಚ್ಚರಿಕೆಯ ವಿಧಾನಗಳ ಒಂದು ಸಂಕ್ಷಿಪ್ತ ಒಳನೋಟ ಈ ಪುಸ್ತಕದಲ್ಲಿ ಕಾಣಬಹುದು.ಅತ್ಯಂತ ಸರಳವಾಗಿ ನಿರೂಪಿಸಲ್ಪಟ್ಟ ಈ ಪುಸ್ತಕ ಕನ್ನಡ ಭಾವಾನುವಾದವಾಗಿದೆ ಎಂದು ಅನುವಾದಕ ವಿಶ್ವಾಸ್ ಭಾರದ್ವಾಜ್ ಹೇಳುತ್ತಾರೆ.
©2024 Book Brahma Private Limited.