ಪಾಲಿ ಪಜ್ಜ ಪುಷ್ಪಾಂಜಲಿ-ಎಂಬುದು ಜಿ.ಪಿ. ರಾಜರತ್ನಂ ಅವರು ಪಾಲಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿ ಸಂಪಾದಿಸಿದ ಗಾಥಾ ಸಾಹಿತ್ಯದ ಕೃತಿ. ಪಾಲಿ ಪದ್ಯ (ಗಾಥಾ ಸಾಹಿತ್ಯ) ಸಾಹಿತ್ಯದ ಉತ್ಕೃಷ್ಟ ಭಾಗಗಳನ್ನು ಭಾಷಾಂತರಿಸಿ ಮೂಲದೊಡನೆ ಕೊಡಬೇಕೆಂಬ ಯೋಜನೆ ಲೇಖಕರದ್ದು. ಈ ಸಂಕಲನದಲ್ಲಿ, ವ್ಯಂಜನಕ್ಕಿಂತ ಮುಖ್ಯವಾಗಿ ಅರ್ಥವನ್ನು ಹಿಡಿದು, ಮೊದಲಿನ 50 ಬಿಡಿಬಿಡಿ ಗಾಹೆ (ಥೆ)ಗಳಿಗೆ ಗದ್ಯಾನುವಾದವನ್ನು ಅನಂತರದ 6 ಕಾವ್ಯಭಾಗಗಳಿಗೆ ಪದ್ಯಾನುವಾದವನ್ನು ಕೊಟ್ಟಿದೆ. ಪುಟದ ತುದಿಯಲ್ಲಿ ನೀಡಿರುವುದು ಗಾಥಾ ಭಾಗಗಳು ಎಂದು ಲೇಖಕರು ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.
ಕರ್ತವ್ಯ, ಮುಪ್ಪು-ಸಾವು, ಧರ್ಮಪದ, ಅಪ್ರಮಾನ, ಚಿತ್ತ, ಒಳ್ಳೆಯದು, ಕೆಟ್ಟುದ್ದು, ಜಾತಿಯನ್ನು ಕೇಳಬೇಡ, ಪರಮಸುಖ, ಸ್ಥವಿರಿ ರೋಹಿಣಿ, ದಂತಿಕಾ ಎಂಬ ಸ್ಥವಿರಿ ಹೀಗೆ ಒಟ್ಟು 18 ಶೀರ್ಷಿಕೆಗಳಡಿ ಪಾಲಿ ಭಾಷೆಯಲ್ಲಿಯ ಉತ್ತಮ ವಿಚಾರಗಳನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ.
©2024 Book Brahma Private Limited.