ಲೋಚನ ಲೇಖನಸೂಚಿ ಕೃತಿಯು ದ್ವಿಶತಮಾನೋತ್ಸವದ ಗ್ರಂಥ ಮಾಲೆಯಾಗಿದ್ದು, ಪಿ.ವಿ.ಕೃಷ್ಣಮೂರ್ತಿ ಹಾಗೂ ನಾ.ಗೀತಾಚಾರ್ಯ ಅವರು ಸಂಪಾದಿಸಿರುವ ಕೃತಿಯಾಗಿದೆ. ಜೂನ್ 1987ರಿಂದ ಡಿಸೆಂಬರ್ 1997ರವೆರೆಗಿನ 30 ಸಂಚಿಕೆಗಳನ್ನು ಈ ಕೃತಿಯು ಹೊಂದಿದೆ. ಈ ಕೃತಿಗೆ ಎನ್ ಬಸವಾರಾಧ್ಯ ಅವರು ಮುನ್ನುಡಿ ಬರೆದಿದ್ದು,'ಲೋಚನ' 1983ರಲ್ಲಿ ಪ್ರಾರಂಭವಾದ ವಿದ್ಯತ್ ಪತ್ರಿಕೆ. ಪ್ರತಿಷ್ಠಾನದ ಸಂಸ್ಥಾಪಕ ಎಂ.ಎ. ಸೀತಾರಾಮಯ್ಯ ನವರ ದೂರದೃಷ್ಟಿಯ ಫಲ. ಯಶಸ್ವೀ ಹದಿನೈದು ವರ್ಷಗಳನ್ನು ಪೂರೈಸಿ ನಾಡಿನ ವಿದ್ಯಾಂಸರಿಗೆ ವೇದಿಕೆಯಾಗಿ, ಮೌಲಿಕ ಚರ್ಚೆಗಳಿಗೆ ಕಾರಣವಾಗಿ ಹೊಸ ಇತಿಹಾಸದ ಆಕರಗಳನ್ನು ಸಾಹಿತ್ಯ ಲೋಕಕ್ಕೆ ನೀಡಿ ತನ್ನ ಪಾಲಿನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಇಂದಿಗೂ ಕರ್ನಾಟಕದಲ್ಲಿ 'ನಿಯತವಾಗಿ ಪ್ರಕಟವಾಗುತ್ತಿರುವ ಏಕೈಕ ವಿದ್ವತ್ ಪತ್ರಿಕೆ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹದಿನೈದು ವರ್ಷಗಳಲ್ಲಿ ಈ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನಗಳು ಮತ್ತು ಇತರ ಮಾಹಿತಿಗಳನ್ನು ಒಳಗೊಂಡ ಈ ಪುಸ್ತಕ ಸಾಹಿತ್ಯ ಮತ್ತು ಸಂಶೋಧನಾಸಕ್ತರಿಗೆ ಉಪಯುಕ್ತವಾಗಿದೆ’ ಎಂದಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಮುನ್ನುಡಿ, ಸಂಪಾದಕೀಯ, ಲೇಖಕ-ಲೇಖನ ಸೂಚಿ, ಗ್ರಂಥ ವಿಮರ್ಶೆ ಸೂಚಿ, ಸಮಸ್ಯಾಪೂರಣ ಲೇಖನ ಸೂಚಿ, ವಸ್ತು ಸಂಗ್ರಹಗಳ ಟಿಪ್ಪಣಿ ಸೂಚಿ,ಅನುಬಂಧಗಳು ಹೀಗೆ ಅನೇಕ ಶೀರ್ಷಿಕಗಳಲ್ಲಿ ಮಾಹಿತಿಗಳಿವೆ
©2024 Book Brahma Private Limited.