‘ಕತೆಗಾರರ ಕೈಪಿಡಿ’ ಕೃತಿಯು ಜೋಗಿ ಅವರ ಕತೆಗಳ ಕುರಿತ ಸಂಕಲನವಾಗಿದೆ. ಕತೆ ಎಂದರೆ ಏನು? ನಾನೂ ಕತೆ ಬರೆಯಬಹುದಾ? ಕತೆಯಲ್ಲಿ ಏನೇನಿರಬೇಕು? ಬೇರೆ ಬೇರೆ ಶೈಲಿಯ ಕತೆಗಳನ್ನು ಒಬ್ಬನೇ ಕತೆಗಾರ ಬರೆಯಬಹುದಾ? ಕಟ್ಟಿದ ಕತೆ ಮತ್ತು ಹುಟ್ಟಿದ ಕತೆಯ ನಡುವಿನ ವ್ಯತ್ಯಾಸ ಏನು? ಕತೆಯಲ್ಲಿ ಕತೆಗಾರ ಒಂದು ಪಾತ್ರ ಆಗಿರುತ್ತಾನಾ? ಕತೆಗಾರರು ಬರೆಯುವ ಕತೆಗಳೆಲ್ಲ ಸುಳ್ಳಾ ನಿಜವಾ? ಕತೆಗಳನ್ನು ಓದುವುದು ಹೇಗೆ? ಸಣ್ಣ ಕತೆ ಎಷ್ಟು ಸಣ್ಣದಿರಬೇಕು? ಕತೆಗೂ ಕಾದಂಬರಿಗೂ ನೀಳ್ಗತೆಗೂ ವ್ಯತ್ಯಾಸ ಏನು? ನಾನು ಬರೆಯುವ ಕತೆಯನ್ನು ಮತ್ತೊಬ್ಬರೂ ಬರೆಯಬಹುದಾ? ಕತೆ ಚೆನ್ನಾಗಿದೆಯೋ ಇಲ್ಲವೋ ಎಂದು ಗೊತ್ತಾಗುವುದು ಹೇಗೆ? ಹೀಗೆ ಕತೆಯ ಕುರಿತು ನೂರೆಂಟು ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರವಿದೆ. ಕನ್ನಡದ 12 ಅತ್ಯುತ್ತಮ ಕತೆಗಳೂ ಇವೆ. ಕತೆಗಾರ ಆಗಬಯಸುವ ಎಲ್ಲರೂ ಓದಲೇಬೇಕಾದ ಸಮಗ್ರ ಕೃತಿ ಜೋಗಿ ಅವರ ಕತೆಗಾರರ ಕೈಪಿಡಿ.
©2025 Book Brahma Private Limited.