ಕನ್ನಡ ಸಾಹಿತ್ಯ ಪ್ರವೇಶಕ್ಕೆ ತುಂಬ ನೆರವಾಗಬಲ್ಲ, ಎಲ್ಲ ವಿವರಗಳನ್ನೂ ಒಂದೆಡೆಗೇ ಕಟ್ಟಿಕೊಟ್ಟಿರುವ ಬಹಳ ಮಹತ್ವದ ಕೃತಿ. ಏಳುನೂರಕ್ಕೂ ಹೆಚ್ಚು ಪುಟಗಳ ಈ ಕೃತಿಯ ಸಂಪಾದನೆಯ ಹಿಂದೆ ರಾಜಪ್ಪ ದಳವಾಯಿಯವರ ವ್ಯಾಪಕ ಅಧ್ಯಯನವಿದೆ. ವಿದ್ಯಾರ್ಥಿ, ವಿದ್ವಾಂಸರೆಲ್ಲರಿಗೂ ಉಪಯುಕ್ತವಾಗಬಲ್ಲ ಕೃತಿ ಇದಾಗಿದೆ. ಬೆನ್ನುಡಿಯಲ್ಲಿ, ಇದೊಂದು ಮಾರ್ಗದರ್ಶಕ ಕೃತಿ. ಸಾಹಿತ್ಯ ವಿದ್ಯಾರ್ಥಿಗಳ ಅವಶ್ಯ ಪರಾಮರ್ಶನ. ಸಾಹಿತ್ಯದ ಬಗ್ಗೆ ಸಮಗ್ರ ಗ್ರಹಿಕೆಯನ್ನು ನೀಡುತ್ತದೆ. ಕನ್ನಡ ಸಾಹಿತ್ಯದ ಹೊಸ ಸಾಧ್ಯತೆಗಳನ್ನು ನಮ್ಮ ಮುಂದೆ ಮಂಡಿಸುತ್ತದೆ ಎಂದು ಡಾ. ಅರ್ತಿಕಜೆ ಕೃಷ್ನಭಟ್ ಬರೆದಿದ್ದಾರೆ.
©2025 Book Brahma Private Limited.