‘ನಮ್ಮ ಹಳ್ಳಿ ಹೇಗಿರಬೇಕೆಂದರೆ’ ಗೊ.ರು. ಚನ್ನಬಸಪ್ಪ ಅವರ ರಚನೆಯ ಕೈಪಿಡಿಯಾಗಿದೆ. ನಮ್ಮ ಹಳ್ಳಿ ಹೇಗಿರಬೇಕೆಂದರೆ...?' ಎಂಬ ಈ ಸಣ್ಣ ಪ್ರಕಟಣೆಯನ್ನು ಹೊರತಂದಿರುವುದು. ಇದರಲ್ಲಿರುವ ವಿಷಯಗಳು ನಿಮಗೆ ತಿಳಿದಿಲ್ಲ - ಎಂದಲ್ಲ. ಹಳ್ಳಿಯಲ್ಲಿ ಹುಟ್ಟಿದ ಎಲ್ಲರಿಗೂ ತಮ್ಮ ಹಳ್ಳಿ ಒಂದು ಮಾದರಿಯಾಗಬೇಕು ಎಂಬ ಆಶಯ ಇದ್ದೇ ಇರುತ್ತದೆ. ಈ ಕೈಪಿಡಿ, ಅಂತಹ ಒಂದು ಆಶಯವೆಂದು ನೀವು ಭಾವಿಸಬೇಕು. ಈ ಕೈಪಿಡಿಯಲ್ಲಿ ಕಾಣಿಸಿರುವ ಆಶಯಗಳಂತೆ ನೀವೆಲ್ಲ ಕೂಡಿಕೊಂಡು, ನಮ್ಮ ಊರಿನ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೀರೆಂಬುದನ್ನು ನಾನು ಬಲ್ಲೆ. ಆದರೂ, ನಮ್ಮ ಊರನ್ನು ಇನ್ನೂ ಹೆಚ್ಚಿನ ಮಟ್ಟಕ್ಕೆ ಸುಧಾರಿಸಲು ಸಾಕಷ್ಟು ಅವಕಾಶವಿದೆ ಎಂದು ನಾನು ತಿಳಿದಿದ್ದೇನೆ.
©2024 Book Brahma Private Limited.