‘ಕನ್ನಡ ಪತ್ರಿಕಾ ಸೂಚಿ’ 1843-1972 ಪತ್ರಿಕಾ ಪ್ರಪಂಚದ ಮೇಲಿನ ಲೇಖನಗಳ ಸಹಿತ ಕೃತಿಯನ್ನು ಡಾ. ಶ್ರೀನಿವಾಸ ಹಾವನೂರ ಅವರು ಸಂಪಾದಿಸಿದ್ದಾರೆ. ಇದು ಕನ್ನಡ ಪತ್ರಿಕಾಲೋಕದ ಮಹತ್ವದ ಸೂಚಿಯಾಗಿದೆ. ಕನ್ನಡದ ಆಧ್ಯ ಪತ್ರಿಕೆ ಮಂಗಳೂರು ಸಮಾಚಾರವು ಪ್ರಕಟಣೆಯಿಂದ (1843) 1972 ರ ವರೆಗೆ ಕಾಣಿಸಿಕೊಂಡ ಪತ್ರಿಕೆಗಳು ಯಾವು ಯಾವುವು, ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಗ್ರಂಥಸೂಚಿ ಯೋಜನೆಯ ಫಲವಾಗಿ ಪುಸ್ತಕಗಳ ವಿವರಗಳು ದೊರೆಯಬಲ್ಲವು. ಆದರೆ ಪತ್ರಿಕೆಗಳ ವಿಚಾರದಲ್ಲಿ ಅವುಗಳ ಅಂದಾಜು ಲೆಕ್ಕ ಸಹಿತ ಸಿಗುವಂತಿಲ್ಲ. ಇಂಥ ಶೋಚನೀಯ ಸ್ಥಿತಿಯ ಮುಖ್ಯ ಕಾರಣವೆಂದರೆ ಪತ್ರಿಕೆಗಳು ಎಷ್ಟೆಂದರೂ ಸಾಮಮಿಕ ಕಾಲ ಸರಿದಂತೆ ಅವು ನಿರುಪಯುಕ್ತ ಎಂಬ ನಮ್ಮ ಭಾವನೆ. ಹಳೆಯ ಪತ್ರಿಕಾ ಸಂಚಿಕೆಗಳು ಮನೆಯಲ್ಲಿ ಬಿದ್ದಿದ್ದರೆ ಅವನ್ನು ಯಾವಾಗ ಲೈಬ್ರರಿಗಳಲ್ಲಿ ತೀರ ಹಳೆಯದಾದ ಪುಸ್ತಕಗಳನ್ನು ಬೇಕಾದರೆ ಉಳಿಸಿಕೊಂಡು ಬಂದಿರಬಹುದು ಆದರೆ ಪತ್ರಿಕೆಗಳ ಸಂಪುಟಗಳನ್ನು ಅವು ಈಚಿನವೇ ಇರಲಿ. ಕಾಯ್ದಿರಿಸುವ ಪ್ರವೃತ್ತಿ ಕಂಡುಬರುವುದಿಲ್ಲ. ಯಾವದೊಂದು ಪತ್ರಿಕೆಯ, ಮೊದಲಿನಿಂದ ಕೊನೆವರೆಗಿನ ಎಲ್ಲ ಸಂಪುಟಗಳು ಅದರ ಪ್ರಕಾಶನ ಕಚೇರಿಯಲ್ಲಿ ಸಹಿತ ದೊರೆಯದೇ ಹೋಗಬಹುದು. ಅಂಥ ನಮ್ಮ ಪ್ರವೃತ್ತಿಯಿಂದಾಗಿ ಲಿಖಿತ ರೂಪದ ಜ್ಞಾನ ಸಮುದಾಯದ ಬಹುಭಾಗವನ್ನು ನಾವು ಕಳೆದುಕೊಂಡಂತಾಗಿದೆ. ಹಾಗಾಗಿ ಈ ಕೃತಿಯಲ್ಲಿ 1843 ರಿಂದ 1972 ವರೆಗಿನ ಪತ್ರಿಕೆಗಳ ಮಾಹಿತಿಯನ್ನು ನೀಡಲಾಗಿದೆ.
©2024 Book Brahma Private Limited.