’ಜ್ಞಾನಧಾರೆ’ ವಿದ್ಯಾರ್ಥಿ ಬದುಕಿನ ಕನ್ನಡಿ ಸಿ.ಆರ್ ಸುರೇಶ್ ಮತ್ತು ಪರುಶುರಾಮ್ ವೈ. ಶಿರಗುಪ್ಪಿ ಬರೆದಿರುವ ಕೃತಿಯಾಗಿದೆ. ಸರ್ಕಾರದ ಮೊರಾರ್ಜಿ, ಏಕಲವ್ಯ, ಕಿತ್ತೂರುರಾಣಿ, ಅಟಲ್ ಬಿಹಾರಿ, ಅಂಬೇಡ್ಕರ್ ವಸತಿ ಶಾಲೆ ಹಾಗೂ ಆದರ್ಶ ಶಾಲೆಗಳ ಪ್ರವೇಶ ಪರೀಕ್ಷೆಗೆ ಈ ಪುಸ್ತಕದಲ್ಲಿ ವಿಷಯವಾರು ಹಾಗೂ ಘಟಕವಾರು ಕೇಳಬಹುದಾದ ಪ್ರಶ್ನೆಗಳನ್ನು ತುಂಬಾ ಸರಳವಾಗಿ ನೀಡಲಾಗಿದೆ. ಪ್ರತಿ ಪಾಠದಿಂದ ಎಷ್ಟು ಪ್ರಶ್ನೆಗಳನ್ನು ರಚಿಸಲು ಸಾಧ್ಯವಾಗುತ್ತದೆಯೋ ಅಷ್ಟು ಪ್ರಶ್ನೆಗಳನ್ನು ರಚನೆ ಮಾಡಲಾಗಿದೆ. ಇಲ್ಲಿ ಗಮನಿಸಬಹುದಾದ ಮತ್ತೊಂದು ಅಂಶವೆಂದರೆ ಪರೀಕ್ಷೆಯಲ್ಲಿ ಪರಿಸರ ಅಧ್ಯಯವನ್ನು ವಿಜ್ಞಾನ ಹಾಗೂ ಸಮಾಜ ವಿಜ್ಞಾನವಾಗಿ ಪ್ರತ್ಯೇಕಿಸಿ ನೀಡಲಾಗಿದೆ. ಅಲ್ಲದೇ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ ತಕ್ಕಂತೆ ಈ ಕೈಪಿಡಿಯನ್ನು ರಚಿಸಲಾಗಿದೆ.
©2025 Book Brahma Private Limited.