'ಉತ್ತರ ಕನ್ನಡಕ್ಕೆ ಒಂದು ಸುತ್ತು' ಉಮೇಶ ಮುಂಡಳ್ಳಿ ಅವರು ಉತ್ತರ ಕನ್ನಡದ ಪ್ರವಾಸಿತಾಣಗಳ ಕುರಿತು ಬರೆದಿರುವ ಕೃತಿ. ಈ ಕೃತಿಗೆ ಉತ್ತರ ಕನ್ನಡದ ಕ.ಸಾ.ಪ. ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಅರವಿಂದ ಕರ್ಕಿಕೋಡಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ನಾಡಿನ ಯಾವುದೇ ಮೂಲೆಯಿಂದ ಉತ್ತರ ಕನ್ನಡ ಜಿಲ್ಲೆಗೆ ಬರುವ ಪ್ರವಾಸಿಗನಿಗೆ ಇದು ಸಹಾಯಕವಾಗುವುದರಲ್ಲಿ ಎರಡು ಮಾತಿಲ್ಲ. ಈ ಹೊತ್ತಿಗೆಯಲ್ಲಿ ಜಿಲ್ಲೆಯ ಮಡಿಲಿನ ಹಸಿರು, ಉಸಿರು, ಬಸಿರನ್ನು ಪ್ರವಾಸಿಗರಿಗೆ ಪರಿಚಯಿಸಿಕೊಡಲು ಮುಂಡಳ್ಳಿಯವರು ಕಾಳಜಿ ವಹಿಸಿದ್ದಾರೆ ಎಂದಿದ್ದಾರೆ.
ಸುಂದರ ಜಿಲ್ಲೆ ಉತ್ತರ ಕನ್ನಡವನ್ನು ಬೊಗಸೆಯಲ್ಲಿಡುವುದು ಸುಲಭದ ಮಾತಲ್ಲ.ಇಲ್ಲಿ ಸಮುದ್ರದ ಅಬ್ಬರವಿದೆ, ನದಿಗಳ ಜುಳುಜುಳುವಿದೆ, ಜಲಪಾತಗಳ ಭೋರ್ಗರೆತವಿದೆ,ಹಸಿರು ಸಹ್ಯಾದ್ರಿಯ ಸೆರಗಿದೆ,ಭಕ್ತಿ ಭಾವಗಳ ಮೊರೆತವುಕ್ಕಿಸುವ ಆರಾಧನಾ ಸ್ಥಳಗಳಿವೆ. ಇಂತ ಚಿತ್ತಾಕರ್ಷಕ ಸೆರಗುಳ್ಳ ಜಿಲ್ಲೆಯನ್ನು ಸಲೀಸಾಗಿ ಹಿಡಿದುಕೊಡುವುದು ಕಷ್ಟಸಾಧ್ಯ. ಇದನ್ನು ಸಾಧ್ಯವಾಗಿಸುವಲ್ಲಿ ಉಮೇಶ ಮುಂಡಳ್ಳಿ ಪ್ರಯತ್ನಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2025 Book Brahma Private Limited.