‘ಸಕಾಲ: ಕರ್ನಾಟಕದಲ್ಲಿ ನಾಗರಿಕ ಸೇವೆಗಳ ಹಕ್ಕು’ ಕೃತಿಯು ನಾಗರಿಕರ ಕೈಪಿಡಿಯಾಗಿದೆ. ಕೃತಿಯ ಲೇಖಕ ವೈ.ಜಿ. ಮುರಳೀಧರ ಅವರು ನಾಗರಿಕರಿಗೆ ಸರಕಾರಿ ಕಛೇರಿಗಳಲ್ಲಿ ನಿಗದಿಪಡಿಸಿದ ಅವಧಿಯೊಳಗೆ ವಿಳಂಬವಿಲ್ಲದೆ ಸೇವಾ ಸೌಕರ್ಯ ಒದಗಿಸುವ ಯೋಜನೆಯೊಂದು ಬಂದಿದೆ – ಅದೇ ಸಕಾಲ. ಬ್ರಿಟನ್‌ನಲ್ಲಿ ಮೊದಲು ಅಂಗೀಕಾರವಾಗಿ ಪ್ರಪಂಚದಾದ್ಯಂತ ವಿವಿಧ ದೇಶಗಳಲ್ಲಿದು ಜಾರಿಯಲ್ಲಿದ್ದು ಉತ್ತಮ ಪರಿಣಾಮ ಬೀರಿದೆ. ನಮ್ಮಲ್ಲಿ ಕಾನೂನುಗಳೇನೋ ತುಂಬಾ ಚೆನ್ನಾಗಿದ್ದು, ಅವುಗಳ ಉದ್ದೇಶವೂ ಜನಸೇವೆಯೇ ಅಚ್ ಆಗಿದೆ. ಆದರೇನು ಮಾಡುವುದು – ಪರಿಹರಿಸಲಾಗದ ಕಗ್ಗಂಟನ್ನು ಸೃಷ್ಟಿಸುವ ಶಕ್ತಿಗಳಿದ್ದಾವಲ್ಲ! ಅಪ್ರಾಮಾಣಿಕ, ಅಸಮರ್ಥ ಅಧಿಕಾರಿಗಳು ಆಡಳಿತ ವ್ಯವಸ್ಥೆಯಲ್ಲಿ ನೇಮಕಗೊಂಡು ಕಾನೂನೊಂದು ಜಾರಿಗೊಳ್ಳುವಲ್ಲಿ, ನಿರ್ವಹಣೆಯಲ್ಲಿ ಗೊಂದಲವೇರ್ಪಟ್ಟು ವೈಫಲ್ಯವುಂಟಾಗುತ್ತದೆ. ಇದನ್ನು ತಡೆಯಲು ಸಾರ್ವಜನಿಕರು ತಮಗೆ ನೀಡಲಾದ ಹಕ್ಕುಗಳನ್ನು ಅರಿತುಕೊಂಡು ಬುದ್ದಿವಂತರಾಗಿ ವರ್ತಿಸಬೇಕಾಗುತ್ತದೆ. ಈಗ ಬಂದಿರುವ ಕಾನೂನನ್ನು ಹೇಗೆ ಉಪಯೋಗಿಸಬೇಕು, ಅದರಲ್ಲಿರುವ ವಿವರಗಳೇನು, ಇದರಲ್ಲಿ ನಾಗರಿಕ ಹಕ್ಕುಗಳೇನೇನಿವೆಯೆಂದು ತಿಳಿಸುವ ಪುಸ್ತಕವಿದು.
(ಹೊಸತು, ಸಪ್ಟೆಂಬರ್ 2012, ಪುಸ್ತಕದ ಪರಿಚಯ)
ಪೂರ್ಣಚಂದ್ರ ತೇಜಸ್ವಿ ತಬರನ ಕಥೆ ಬರೆದು ಕಾಸರವಳ್ಳಿ ಅದನ್ನು ಚಲನಚಿತ್ರವಾಗಿಸಿ, ಇಂದಿರಾಗಾಂಧಿ ವೀಕ್ಷಿಸಿ, ಸರ್ಕಾರಿ ಕಛೇರಿಗಳ ಕಾರ್ಯವೈಖರಿಗೆ ಛೀಮಾರಿ ಹಾಕಿ, ಕಾರ್ಮಿಕರ ಭವಿಷ್ಯನಿಧಿ ಕೈಸೇರಲು ಗಡುವು ನಿಗದಿಪಡಿಸಿದ್ದು - ಈ ಹಳೆಯ ಕಥೆ ಎಲ್ಲ ನಮ್ಮ ದೇಶದ್ದೆ! ಇದೀಗ ನಾಗರಿಕರಿಗೆ ಸರಕಾರಿ ಕಛೇರಿಗಳಲ್ಲಿ ನಿಗದಿಪಡಿಸಿದ ಅವಧಿಯೊಳಗೆ ವಿಳಂಬವಿಲ್ಲದೆ ಸೇವಾ ಸೌಕರ್ಯ ಒದಗಿಸುವ ಯೋಜನೆಯೊಂದು ಬಂದಿದೆ – ಅದೇ ಸಕಾಲ. 'ನಾಗರಿಕರ ಸೇವೆಗಳ ಖಾತರಿ ಅಧಿನಿಯಮ – 2011" ಎಂಬುದು ಈ ಸನ್ನದಿನ ಹೆಸರು. ಬ್ರಿಟನ್‌ನಲ್ಲಿ ಮೊದಲು ಅಂಗೀಕಾರವಾಗಿ ಪ್ರಪಂಚವಾದ್ಯಂತ ವಿವಿಧ ದೇಶಗಳಲ್ಲಿದು ಜಾರಿಯಲ್ಲಿದ್ದು ಉತ್ತಮ ಪರಿಣಾಮ ಬೀರಿದೆ. ನಮ್ಮಲ್ಲಿ ಕಾನೂನುಗಳೇನೋ ತುಂಬಾ ಚೆನ್ನಾಗಿದ್ದು, ಅವುಗಳ ಉದ್ದೇಶವೂ ಜನಸೇವೆಯೇ ಅಚ್ ಆಗಿದೆ. ಆದರೇನು ಮಾಡುವುದು – ಪರಿಹರಿಸಲಾಗದ ಕಗ್ಗಂಟನ್ನು ಸೃಷ್ಟಿಸುವ ಶಕ್ತಿಗಳಿದ್ದಾವಲ್ಲ! ಅಪ್ರಾಮಾಣಿಕ, ಅಸಮರ್ಥ ಅಧಿಕಾರಿಗಳು ಆಡಳಿತ ವ್ಯವಸ್ಥೆಯಲ್ಲಿ ನೇಮಕಗೊಂಡು ಕಾನೂನೊಂದು ಜಾರಿಗೊಳ್ಳುವಲ್ಲಿ, ನಿರ್ವಹಣೆಯಲ್ಲಿ ಗೊಂದಲವೇರ್ಪಟ್ಟು ವೈಫಲ್ಯವುಂಟಾಗುತ್ತದೆ. ಇದನ್ನು ತಡೆಯಲು ಸಾರ್ವಜನಿಕರು ತಮಗೆ ನೀಡಲಾದ ಹಕ್ಕುಗಳನ್ನು ಅರಿತುಕೊಂಡು ಬುದ್ದಿವಂತರಾಗಿ ವರ್ತಿಸಬೇಕಾಗುತ್ತದೆ. ಈಗ ಬಂದಿರುವ ಕಾನೂನನ್ನು ಹೇಗೆ ಉಪಯೋಗಿಸಬೇಕು, ಅದರಲ್ಲಿರುವ ವಿವರಗಳೇನು, ಇದರಲ್ಲಿ ನಾಗರಿಕ ಹಕ್ಕುಗಳೇನೇನಿವೆಯೆಂದು ತಿಳಿಸುವ ಪುಸ್ತಕವಿದು. ಶ್ರೀ ವೈ. ಜಿ. ಮುರಳೀಧರ ನಾಗರಿಕರಿಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.
©2024 Book Brahma Private Limited.