ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರು, ಸಣ್ಣಕತೆ, ಕವನ, ಕಾದಂಬರಿ, ನಾಟಕ, ಹರಟೆಗಳು, ಬಾಲ ಸಾಹಿತ್ಯ, ವೈಚಾರಿಕ, ವಿಜ್ಞಾನ, ಜೀವನ ಚರಿತ್ರೆ, ವಿಶ್ವಕೋಶ, ಬಿಡಿ ಬರಹಗಳು, ಸಂಪಾದನೆ, ಅನುವಾದ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳು ಸೇರಿದಂತೆ ಒಟ್ಟು 417 ಕೃತಿಗಳನ್ನು ರಚಿಸಿದ್ದು, ಅವರ ವಿರಾಟ ವ್ಯಕ್ತಿತ್ವದ ದರ್ಶನಕ್ಕೆ ಕನ್ನಡಿ ಹಿಡಿಯುತ್ತದೆ. ಕೃತಿಯ ಸಂಪಾದಕಿ ಮಾಲಿನಿ ಮಲ್ಯ ಅವರು ಪ್ರಸ್ತಾವನೆಯಲ್ಲಿ ‘ಕಾರಂತರ ಬರಹಗಳ ವಿಸ್ತಾರವನ್ನು ಹಾಗೂ ಅವರ ಸಾಧನೆಯನ್ನು ಒಂದೆಡೆ ಪಟ್ಟಿ ಮಾಡಿ ತೋರಿಸುವುದು ಈ ಕೈಪಿಡಿಯ ಉದ್ದೇಶ. ಆದರೆ, ವಿಸ್ತೃತ ವಿವರಣೆಗಳಿಗೆ ತಾವು ಪ್ರಕಟಿಸಿದ ‘ಶಿವರಾಮ ಕಾರಂತರ ವಾಙ್ಮಯ ವೃತ್ತಾಂತ’ವನ್ನೇ ನೋಡಬೇಕಾಗುತ್ತದೆ. ಕಾರಂತರ ಬರಹಗಳನ್ನು ಕುರಿತ ಸಂಗ್ರಹ, ಸಂಪಾದನೆಗಾಗಿ ಹಲವಾರು ಮೂಲಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. 400ಕ್ಕೂ ಮಿಕ್ಕಿದ ಹಲವಾರು ಬೃಹತ್ ಗ್ರಂಥಗಳ ಕಾರಂತರ ಬರವಣಿಗೆಗಳ ಬಗ್ಗೆ ಸಮಗ್ರ ಸಂಪುಟವಂತೂ ಅಸಾಧ್ಯ. ಅಲ್ಲಿಯತನಕ ಇಂತಹ ಕೈಪಿಡಿ ಹಾಗೂ ವಾಙ್ಮಯ ವೃತ್ತಾಂತದಂತಹ ಸಾರಸಂಗ್ರಹ ಬೇಕಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2025 Book Brahma Private Limited.