’ಬಹಿರಂಗ ಶುದ್ಧಿ’ ನಾಸೋಮೇಶ್ವರ ಅವರ ರಚನೆಯ ಶರೀರ ಸ್ವಚ್ಛತೆಗೊಂದು ಕೈಗನ್ನಡಿಯಾಗಿದೆ ಎಂದರು. ಲೇಖಕರಾದ ಡಾ.ನಾ ಸೋಮೇಶ್ವರ ಅವರು ವೃತ್ತಿಯಿಂದ ವೈದ್ಯರು.ಪ್ರವೃತ್ತಿಯಿಂದ ಬರಹಗಾರರು. ಬೆಂಗಳೂರಿನ ಚಂದನ ವಾಹಿನಿಯಲ್ಲಿ ಇವರು ನಡೆಸಿಕೊಡುತ್ತಿರುವ 'ಥಟ್ ಅಂತ ಹೇಳಿ' ಕ್ವಿಜ್ ಕಾರ್ಯಕ್ರಮ ಲಿಮ್ಕಾ ದಾಖಲೆ ಮಾಡಿ ಗಿನ್ನಿಸ್ ದಾಖಲೆ ಮಾಡುವತ್ತ ಹೆಜ್ಜೆ ಹಾಕುತಿದೆ. ಇವರು ಬರೆದ 'ಬಹಿರಂಗ ಶುದ್ದಿ- ಶರೀರ ಸ್ವಚ್ಛತೆಗೊಂದು ಕೈಗನ್ನಡಿ' ಎನ್ನುವ ಈ ಪುಸ್ತಕ ಕನ್ನಡ ಮಾತ್ರವಲ್ಲ ಇಂಗ್ಲಿಷ್ ಭಾಷೆಯಲ್ಲೂ ಲಭ್ಯವಾಗದಂತಹ ಅಪರೂಪದ ಪುಸ್ತಕ.ಶರೀರ ಸ್ವಚ್ಛತೆಯೇನು ಮಹಾ!ಎಲ್ಲರಿಗೂ ಗೊತ್ತಿರುವಂತಹುದೇ ಎನ್ನುವ ಜನರು ಇದನ್ನೊಮ್ಮೆ ಓದಬೇಕು. ಆಗ ಅವರಿಗೆ' ತಮಗೆಷ್ಟು ತಿಳಿದಿರುವುದಕ್ಕಿಂತ ತಿಳಿಯಬೇಕಾದ್ದು ಬೆಟ್ಟದಷ್ಟಿದೆ' ಎನ್ನುವ ಸತ್ಯ ಮನವರಿಕೆಯಾಗುತ್ತದೆ.ಶರೀರ ಸ್ವಚ್ಛತೆಯು ಆರೋಗ್ಯದ ಅಡಿಗಲ್ಲು.ನಿಮ್ಮ ಸ್ನೇಹಿತರಿಗೆ, ಬಂಧುಗಳಿಗೆ ನೀಡಬಹುದಾದ ಉತ್ತಮ ಕೃತಿ ಎನ್ನುವುದು ಪ್ರಕಾಶಕರ ಮಾತು.
©2025 Book Brahma Private Limited.