‘ಜನಾಧಿಕಾರ’ ಲೇಖಕ ಎಸ್. ಜನಾರ್ದನ ಮರವಂತೆ ಅವರ ಅಂಕಣ ಬರಹಗಳ ಸಂಕಲನ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದ ಎಸ್. ಜನಾರ್ದನ್ ಅವರು ತಮ್ಮ ವೃತ್ತಿಯಲ್ಲಿ ಕಂಡುಕೊಂಡ ಅನುಭವಗಳನ್ನು ಇಲ್ಲಿ ದಾಖಲಿಸಿದ್ದಾರೆ. ಯೋಜನೆಗಳು, ಅವುಗಳ ಹಿನ್ನೆಲೆ, ಕಾರ್ಯ ಪ್ರವೃತ್ತಿ ಇತ್ಯಾದಿ ಕುರಿತಾಗಿ ಅವರು ಬರೆಯುತ್ತಿದ್ದ ಜನಪ್ರಿಯ ಅಂಕಣಬರಹಗಳನ್ನು ‘ಜನಾಧಿಕಾರ’ ಶೀರ್ಷಿಕೆಯಡಿ ಪ್ರಕಟಿಸಿದ್ದಾರೆ. ಕೃತಿಯು ಗ್ರಾಮ ಪಂಚಾಯಿತಿ ಮಾರ್ಗದರ್ಶಿಯಾಗಿದ್ದು, ಪಂಜಾಯಿತಿ ಆಡಳಿತ ವ್ಯವಸ್ಥೆಯ ಮಹತ್ವ, ಅರಿವು ಮತ್ತು ಜಾಗೃತಿಯ ಅಗತ್ಯವನ್ನು ಸರಳವಾಗಿ ತಿಳಿಸುವ ಆಕರ ಗ್ರಂಥವಾಗಿದೆ.
‘ಜನಾಧಿಕಾರ’ ಕೃತಿಯ ಕುರಿತು ಲೇಖಕ ಎಸ್. ಜನಾರ್ದನ್ ಅವರ ಮಾತು
©2025 Book Brahma Private Limited.