'ಯಥಾರಾಜ ತಥಾಪ್ರಜಾ' ಎನ್ನುವ ಮಾತನ್ನು ಸ್ವಲ್ಪ ಬದಲಿಸಿ 'ಯಥಾ ಲೇಖಕ ತಥಾ ಪುಸ್ತಕ' ಎಂದು ಹೇಳಬಹುದು. ಇದೇ ಮಾತನ್ನು ಇನ್ನೊಂದು ಬಗೆಯಲ್ಲಿ ಹೇಳುವುದಾದರೆ, “ಮಸ್ತಕವಿದ್ದಂತೆ ಪುಸ್ತಕ, ಕೃತಿಕಾರನ ಚಿಂತನೆಗೆ ಅನುಗುಣವಾಗಿ ಪುಸ್ತಕ ರೂಪುಗೊಳ್ಳುತ್ತದೆ. ಹಾಗೆಯೇ ಓದುಗರ ಅಭಿರುಚಿಗೆ ತಕ್ಕಂತೆಯೇ ಪ್ರಸ್ತಕಗಳ ಆಯ್ಕೆಯೂ ಇರುತ್ತದೆ. ಪುಸ್ತಕದಲ್ಲಿಯ ಒಂದು ವಿಚಾರವೆಂದರೆ 'ಪು' ಇದ್ದಹಾಗೆ, “ಪೂ' ಎಂದರೆ 'ಹೂವು, ಈ ಹೂವು ಬ್ರಹ್ಮನ ಸೃಷ್ಟಿ ಎನ್ನುವುದು ಪುರಾಣದ ಕಲ್ಪನೆ, ಬ್ರಹ್ಮನೂ ಪುರಾಣದ ವ್ಯಕ್ತಿಯೇ ಆದರೂ ಈತ ಬುದ್ದಿಗೆ ಸಂಕೇತ. ಯಾವುದೇ ಒಂದು ವಿಚಾರ ಹೂವಿನಷ್ಟೇ ಕೋಮಲವಾದುದು. ಎಂಥ ಹೂಗಳನ್ನು ಸೇರಿಸಿ ನೀವು ಮಾಲೆ ಮಾಡುತ್ತೀರೋ ಅಂತಹದೇ ಪುಸ್ತಕ ರೂಪುಗೊಳ್ಳುತ್ತದೆ. ಬಹುಸಂಖ್ಯಾತ ವರ್ಗದ ಅಭಿರುಚಿಯಂತೆ ಸಮಾಜವೂ ರೂಪ ತಾಳುತ್ತದೆ. ಸಮಾಜವನ್ನು ಕಟ್ಟುವಲ್ಲಿ ಕೆಡುಹುವಲ್ಲಿ ಅಸ್ತ್ರದಂತೆ ಬಳಕೆಯಾಗುತ್ತದೆ. ಹೀಗಾಗಿ ಪುಸ್ತಕಗಳು ಪುಸ್ತಕವೆಂಬ ಅಸ್ತ್ರವನ್ನು ನಾವು ಬಳಸಿಕೊಳ್ಳುವ ರೀತಿಯಲ್ಲಿದೆ, ಓದುಗರೇ ದೇವರು” “ಗ್ರಂಥದಾನ ಗೋದಾನಕ್ಕಿಂತ ಮಿಗಿಲು? ಎಂಬ ಸೂತ್ರವನ್ನು ಬಳಕೆಗೆ ತರುವ ಇಂಥ ಅಗತ್ಯವಿದೆ. ದೇವರನ್ನು ನಂಬಿದವರು ನಂಬದವರನ್ನೂ ಈ ನೆಲೆಯಿಂದ ಬಳಸಿಕೊಳ್ಳ ಬೇಕಾಗಿದೆ ಎನ್ನುತ್ತಾರೆ ಅರವಿಂದ ಮಾಲಗತ್ತಿ.
©2025 Book Brahma Private Limited.