'ಅನನ್ಯ ಸಮ್ಮೇಳನ' ಪುಸ್ತಕವು ವಿ ಗಣೇಶ್ ಅವರ ಸರಳ ಜೀವನ, ನಿಸ್ವಾರ್ಥ ಸೇವೆ, ಸ್ನೇಹಪರ ವರ್ತನೆ, ಸೌಜನ್ಯಯುತ ನಡೆಯ ಕುರಿತಂತೆ ಪರಿಚಯಿಸುವ ಅನನ್ಯ ಕೃತಿಯಾಗಿ ಹೊರಹೊಮ್ಮಿದೆ. ಸವಿಯನುಸಿರಿ, ಸವಿಯನಂಡು, ಸವಿಯನೀವ; ಸ್ನೇಹಜೀವಿಯ ಪರಿಚಯಿಸುವ ಕವನಗಳು ಒಂದೆಡೆಗಾದರೆ, ಸಮ್ಮೇಳನ ಅಧ್ಯಕ್ಷರ ಮೇರು ವ್ಯಕ್ತಿತ್ವವನ್ನು ಪರಿಚಯಿಸುವ ಲೇಖನಗಳು ಹಾಗೂ ಸಂದರ್ಶನ ಲೇಖನಗಳು ಇನ್ನೊಂದೆಡೆಗೆ, ಮಗದೊಂದು ಕಡೆ ಸುಂದರ ಚಿತ್ರಗಳ ಅನಾವರಣ ಹೀಗೆ ಒಂದು ಸಮಗ್ರ ಗ್ರಂಥವಾಗಿ ಹೊರಹೊಮ್ಮಿದೆ .ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪದವಿಗೆ ಇದಕ್ಕಿಂತ ಇನ್ನೊಂದು ಧನ್ಯತೆಯ ಭಾವ ಇದೆಯೇ . ಇಂತಹ ಕೃತಿಯನ್ನು ಈ ಮೊದಲೆಲ್ಲೂ ನಾನು ಕಂಡಿರಲಿಲ್ಲ .ಕೇಳಿರಲೂ ಇಲ್ಲ .ಕನ್ನಡ ಸಾಹಿತ್ಯ ಪರಿಷತ್ತಿನವರು ಇಂತಹ ಕೃತಿಯೊಂದನ್ನು ತಾಲೂಕು ಮಟ್ಟದಲ್ಲಾಗಲಿ, ಜಿಲ್ಲಾಮಟ್ಟದಲ್ಲಾಗಲಿ, ರಾಜ್ಯಮಟ್ಟದಲ್ಲಾಗಲಿ ಹೊರ ತಂದಿರುವುದನ್ನು ನಾ ಕಾಣೆ.ಮುಂದಿನ ಸಾಹಿತ್ಯ ಸಮ್ಮೇಳನಗಳಲ್ಲಿ ಇಂತಹ ಕೃತಿ ಒಡ ಮೂಡಿ ಬರುವಲ್ಲಿ ಸಹಾಯಕವಾದೀತು. - ಅಂಬ್ರೈಯ್ಯ ಮಠ ಬಿದನೂರು
©2025 Book Brahma Private Limited.