ಉತ್ದತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಯಕ್ಷ-ಯಕ್ಷಿಯರಿಗೆ ಪ್ರತ್ಯೇಕ ಪೂಜಾ ಮಂದಿರಗಳು ಸಾಕಷ್ಟಿವೆ. ಕರ್ನಾಟಕದ ಜೈನ ಸಂಸ್ಕೃತಿಯಲ್ಲಿ ಯಕ್ಷ-ಯಕ್ಷಿಯರ ಪಾತ್ರ ಪ್ರಮುಖ. ಈ ಯಕ್ಷ-ಯಕ್ಷಿಯರು ಯಾವುದೇ ಜಾತಿಯನ್ನು ಪ್ರತಿನಿಧಿಸುವುದಿಲ್ಲ ಎಂಬುದು ಮುಖ್ಯ. ಕನ್ನಡ ವಿಶ್ವವಿದ್ಯಾಲಯದ ಅಭೇರಾಜ್ ಬಲ್ದೋಟ ಜೈನ ಸಂಸ್ಕೃತಿ ಅಧ್ಯಯನ ಪೀಠವು ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿತವಾದ ಸಂಶೋಧನಾ ಪ್ರಬಂಧಗಳನ್ನು ಕೃತಿಯಲ್ಲಿ ಪ್ರಕಟಿಸಲಾಗಿದೆ. ಈ ಕೃತಿಯು ಯಕ್ಷ-ಯಕ್ಷಿಯರ ಸಾಂಸ್ಕೃತಿಕ ಅಧ್ಯಯನಕ್ಕೆ ಮಹತ್ವದ ಒಳನೋಟ ನೀಡುತ್ತದೆ.
©2024 Book Brahma Private Limited.