ಗೀತಾ ಕೃಷ್ಣಮೂರ್ತಿ ಅವರ ಪ್ರಧಾನ ಸಂಪಾದಿತ ಕೃತಿ ʻಸವಿಸ್ಮೃತಿ: ವಿಧವಾ ಪುನರ್ವಿವಾಹದ ರೂವಾರಿಗಳುʼ. ಬಾ.ವೆಂ. ಶೇಷ ಅವರು ಪುಸ್ತಕದ ಗೌರವ ಸಂಪಾದಕರು. ಹೆಣ್ಣಿಗೆ ಪುನರ್‌ವಿವಾಹದ ಅವಕಾಶಗಳು ವೇದ ಪುರಾಣ ಕಾಲದಿಂದ ಇಂದಿನವರೆಗೂ ಇದೆ ಎನ್ನುವ ವಿಷಯದ ಕುರಿತು ಪ್ರಸ್ತುತ ಕೃತಿ ಚರ್ಚಿಸುತ್ತದೆ. ವೆಂಕಟವರದಯ್ಯಂಗಾರರು ಮತ್ತು ಅವರ ಪತ್ನಿ ಕೃಷ್ಣಮ್ಮ ಅವರನ್ನು ಕುರಿತು ಡಿವಿಜಿ ಅವರು ʻಜ್ಞಾಪಕ ಚಿತ್ರಶಾಲೆʼಯಲ್ಲಿ ಬರೆದ ಬರಹವನ್ನೂ ಇಲ್ಲಿ ಸೇರಿಸಿದ್ದಾರೆ. ಕೇವಲ 22 ವರ್ಷ ಬದುಕಿ, ಅನಿಷ್ಟಗಳ ವಿರುದ್ದದ ಹೋರಾಟದಲ್ಲಿ ದಂತಕಥೆಯಾದ ಹೆನ್ರಿ ಲೂಯಿಸ್ ವಿವಿಯನ್ ಡೆರೊಜಿಯೊ, ಈಶ್ವರಚಂದ್ರ ವದ್ಯಾಸಾಗರ, ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ, ಧೋಂಡೋ ಕೇಶವ ಕರ್ವೆ ಮೊದಲಾದವರ ಕುರಿತ ಲೇಖನಗಳೂ ಇಲ್ಲಿವೆ. ಜೊತೆಗೆ ನಮ್ಮ ನಾಡಿನ ಸಾಹಿತಿ, ಚಿಂತಕರು ಸಮಾಜ ಸುಧಾರಕರಾದ ಬಗ್ಗೆಯೂ ವಿವರಗಳಿವೆ.
©2025 Book Brahma Private Limited.