‘ಮಹಿಳೆಯರಿಗೆ ಮಾತ್ರವಲ್ಲ!’ ನಡಹಳ್ಳಿ ವಸಂತ್ ಅವರ ಕೃತಿಯಾಗಿದೆ. ಮಹಿಳೆಯ ಮನಸ್ಸು ಮತ್ತು ಆ ಮನಸ್ಸನ್ನು ರೂಪಿಸುವ ಸಾಮಾಜಿಕ ಬೆಲೆ ಎರಡನ್ನೂ ಒಂದರೊಡನೊಂದು ಬೆಸೆದು ಬರೆದ ಹೊತ್ತಗೆ ಇದಾಗಿದೆ. ತಮ್ಮ ವೃತ್ತಿಯಲ್ಲಿ ಇದಿರಾದ ಹಲವಾರು ಸವಾಲುಳ್ಳ ಸಮಸ್ಯೆಗಳ ಸಿಕ್ಕುಗಳನ್ನು ಸಾವಧಾನದಿಂದ ಜಡಿಸುತ್ತಲೇ, ಇದೇಕೆ ಹೀಗೆ? ಎಂದು ಚಿಂತಿಸಿದ ಸೂಕ್ಷ್ಮ ಮನಸ್ಸಿನ ಫಲವೂ ಇದಾಗಿದೆ. ಈ ಕೃತಿಯುದ್ದಕ್ಕೂ ಮಹಿಳೆಯನ್ನು ನಿರ್ಬಂಧಿಸಿದ ಸಾಮಾಜಿಕ ರಚನೆಯಿಂದಾಗಿ ಅವಳ ಮನಷ್ಟೂ ಕೂಡಾ ಹೇಗೆ ನಿರ್ಬಂಧಕ್ಕೆ ಒಳಗಾಗಿದೆ ಮತ್ತು ಆಕೆಯೇ ಹೇಗೆ ಅದರಿಂದ ಹೊರಬರುವ ದಾರಿಯಿದ್ದರೂ ಸಂಕೋಲೆಯೊಳಗೇ ಅಡಗಿ ಕುಳಿತುಕೊಳ್ಳುತ್ತಾಳೆ ಎಂಬುದನ್ನು ಅನಾವರಣ ಮಾಡಲಾಗಿದೆ.
©2025 Book Brahma Private Limited.