ಸ್ತ್ರೀ ಸಂಸ್ಕೃತಿ ಶಿಕ್ಷಣ

Author : ರೋಹಿಣಿ ಬಿ.ಎಂ.

Pages 153

₹ 45.00




Year of Publication: 2001
Published by: ಹೇಮಾಂಶು ಪ್ರಕಾಶನ
Address: “ದೃಶ್ಯ", ಗೊಲ್ಲಚ್ಚಿಲ್, ದೇರೆಬೈಲು, ಮಂಗಳೂರು 575006

Synopsys

‘ಸ್ತ್ರೀ ಸಂಸ್ಕೃತಿ ಶಿಕ್ಷಣ ’ ಬಿ. ಎಂ. ರೋಹಿಣಿ ಅವರ ಲೇಖನಗಳಾಗಿವೆ. ಸ್ತ್ರೀಯರ ಸಮಸ್ಯೆಗಳ ಬೇರುಗಳನ್ನೂ, ಅವ್ಯವಸ್ಥೆಯ ತಾಣಗಳಗಳನ್ನೂ ಗುರುತಿಸುವ ಗಂಭೀರ ಚರ್ಚಾ ಸ್ವರೂಪದಲ್ಲಿ ಹೊರಹೊಮ್ಮಿದ ಲೇಖನಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.

About the Author

ರೋಹಿಣಿ ಬಿ.ಎಂ.
(06 April 1944)

ರೋಹಿಣಿ ಬಿ.ಎಂ., ಎಂ.ಎ.(ಕನ್ನಡ) ಹಿಂದಿ(ಪ್ರವೀಣ) ಶಿಕ್ಷಣ ಪಡೆದ ಇವರು ನಿವೃತ್ತ ಶಿಕ್ಷಕಿ. 1944ರ ಏಪ್ರಿಲ್‌ 06 ರಂದು ಬಂಗ್ರ ಮಂಜೇಶ್ವರ ಕಾಸರಗೋಡಿನಲ್ಲಿ ಜನಿಸಿದರು.  ತಂದೆ  ಟಿ. ಕೊಗ್ಗಪ್ಪ, ತಾಯಿ ಬಿ.ಎಂ. ದೇವಕಿ. ಈಗ ಕೇರಳಕ್ಕೆ ಸೇರಿದ ಕಾಸರಗೋಡಿನ ಬಂಗ್ರಮಂಜೇಶ್ವರದ ಬಿ.ಎಂ.ರೋಹಿಣಿ ಓದಿದ್ದು ಮಂಗಳೂರಿನಲ್ಲಿ. ಟಿ.ಸಿ.ಹೆಚ್, ತರಬೇತಿ ಪಡೆದು ಶಿಕ್ಷಕಿಯಾಗಿದ್ದವರು (1964-2002), ನಿವೃತ್ತಿಯ ನಂತರ ತುಳಿತಕ್ಕೆ ಒಳಗಾದವರ ಬದುಕು ಬವಣೆಗಳ ಅಧ್ಯಯನ ಮತ್ತು ಸಂಸ್ಕತಿ ಸಂಶೋಧನೆಯಲ್ಲಿ ತೊಡಗಿಸಿಕೊಂಡು ಮಂಗಳೂರಿನ `ಡೀಡ್' ಸಂಸ್ಥೆಯ ಮೂಲಕ ವೇಶ್ಯಾಜೀವನದ ಅಧ್ಯಯನ ನಡೆಸಿದರು. ಆಮೇಲೆ ಗುಲಾಬಿ ಬಿಳಿಮಲೆಯವರ ಜೊತೆ ಸೇರಿ ದ.ಕ ಜಿಲ್ಲಾ ಮಹಿಳಾ ಕಾರ್ಮಿಕರ ಹೋರಾಟವನ್ನು ...

READ MORE

Reviews

ಹೊಸತು-2002-ಏಪ್ರಿಲ್‌

ಸ್ತ್ರೀಯರ ಸಮಸ್ಯೆಗಳ ಬೇರುಗಳನ್ನೂ, ಅವ್ಯವಸ್ಥೆಯ ಆಳಗಳನ್ನೂ ಗುರುತಿಸುತ್ತ ಗಂಭೀರ ರೀತಿಯ ಚರ್ಚಾ ಸ್ವರೂಪದಲ್ಲಿ ಹೊರಹೊಮ್ಮಿದ ಲೇಖನಗಳಿವು. ಸ್ತ್ರೀಯರ ಸರ್ವತೋಮುಖ ಏಳಿಗೆಗೆ ಉತ್ತಮ ಶಿಕ್ಷಣದ ವ್ಯವಸ್ಥೆಯ ಅಗತ್ಯವನ್ನು ಒತ್ತಿ ಹೇಳಲಾಗಿದೆ. ಇಂದಿನ ಜಾಗೃತ ಮಹಿಳೆ ಹಿಂದಿನ ಶೋಷಿತ ಮಹಿಳೆಗೆ ಹೋಲಿಸಿದಲ್ಲಿ ಬಹಳಷ್ಟು ಸುಧಾರಣೆ ಕಂಡುಬಂದಿರುವುದಂತೂ ನಿಜ ! ಮಹಿಳೆಯ ಜವಾಬ್ದಾರಿ, ಸ್ಥಾನಮಾನಗಳು ಸಮಾಜಕ್ಕೆಷ್ಟು ಮುಖ್ಯವೆಂದೂ ಚರ್ಚಿಸಲಾಗಿದೆ.

Related Books