‘ಹರೆಯದವರ ಮನೋಲೋಕ’ ಸಿ. ಆರ್. ಚಂದ್ರಶೇಖರ್ ಅವರ ಕೃತಿಯಾಗಿದೆ. ಇದಕ್ಕೆ ವಸುಂಧರ ಭೂಪತಿಯವರ ಬೆನ್ನುಡಿ ಬರಹವಿದೆ; ಪ್ರಖ್ಯಾತ ಮನೋವೈದ್ಯರು, ವೈದ್ಯ ಸಾಹಿತ್ಯದ ದಿಗ್ಗಜರು, ಪದ್ಮಶ್ರೀ ಪುರಸ್ಕೃತರೂ ಆದ ಡಾ. ಸಿ.ಆರ್. ಚಂದ್ರಶೇಖರ್ ಅವರ ಲೇಖನಿಯಿಂದ ಮೂಡಿಬಂದಿರುವ ಕೃತಿ 'ಹರೆಯದವರ ಮನೋಲೋಕ', ಹರೆಯದ ಹುಡುಗ-ಹುಡುಗಿಯರು ಹಲವಾರು ಮಾನಸಿಕ ತೊಳಲಾಟಗಳಿಗೆ ಒಳಗಾಗುತ್ತಾರೆ. ಸರಿ-ತಪ್ಪುಗಳ, ಬೇಕು-ಬೇಡಗಳ ನಡುವಿನ ವ್ಯತ್ಯಾಸ ಅರಿಯದೇ ದಾರಿ ತಪ್ಪುವ ಸಾಧ್ಯತೆ ಹೆಚ್ಚು. ಈ ಸಮಯದಲ್ಲಿ ಸುತ್ತಲಿನ ಪರಿಸರ, ಗೆಳೆಯ/ಗೆಳತಿಯರ ಪ್ರಭಾವಕ್ಕೊಳಗಾಗುವುದು ಸ್ವಾಭಾವಿಕ. 'ಕೋವಿಡ್-19 ನಂತರ ಆನ್‌ಲೈನ್ ತರಗತಿಗಳೊಂದಿಗೆ ಅಂತರ್ಜಾಲ ಜಗತ್ತಿನೊಂದಿಗೆ ನೇರ ಸಂಪರ್ಕ ಹೊಂದಲು ಯುವಜನತೆಗೆ ಸಲೀಸಾಯಿತು. ಇದರಿಂದ ಮನಸ್ಸಿಗೆ ಮೀರಿದ ವಿಷಯಗಳ, ವಿಚಾರಗಳ ಪ್ರಲೋಭನೆಗೆ ಈಡಾಗಿ ಪಠ್ಯದಿಂದ ವಿಮುಖರಾಗಿ ಶಿಕ್ಷಣವನ್ನು ಕೆಲವರು ಮರೀಚಿಕೆಯಾಗಿಸಿಕೊಂಡಿದ್ದಾರೆ. ಮಕ್ಕಳಿಂದ ಗಿಜಿಗಿಜಿಗುಡುತ್ತಿದ್ದ ಆಟದ ಮೈದಾನಗಳು ಬಿಕೋ ಎನ್ನುತ್ತಿವೆ. ಕುಳಿತಲ್ಲೇ ಕುಳಿತು ವೀಡಿಯೋ ಗೇಮ್ಸ್ ಗಳಿಗೆ ಆಕರ್ಷಿತರಾಗಿ ಅದಕ್ಕೇ ಬಲಿಯಾಗಿ ಬೊಜ್ಜು ಬೆಳೆಸಿಕೊಂಡು ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಹರೆಯದಲ್ಲಿ ಕಂಡುಬರುವ ಚಿತ್ತಚಂಚಲತೆ, ಪರೀಕ್ಷಾಭಯ, ಲೈಂಗಿಕ ತೊಂದರೆಗಳು, ಅಪರಾಧ ಪ್ರವೃತ್ತಿ, ಮದ್ದು-ಮದ್ಯವ್ಯಸನ ಮುಂತಾದವುಗಳ ಬಗ್ಗೆ 'ಹರೆಯದವರ ಮನೋಲೋಕ' ಕೃತಿ ವಿವರವಾಗಿ ತೆರೆದಿಡುತ್ತದೆ.
©2025 Book Brahma Private Limited.