‘ಕಾಲುಹಾದಿಯ ಕೋಲ್ಮಿಂಚುಗಳು- ಮಹಿಳಾ ವಿಜ್ಞಾನಿಗಳು’ ನೇಮಿಚಂದ್ರ ಅವರು ನಿರೂಪಿಸಿರುವ ಮಹಿಳಾ ಸಾಧಕಿಯರ ಚಿತ್ರಣಗಳು. ಇತಿಹಾಸದ ಆಳಕ್ಕಿಳಿದು ವಿಜ್ಞಾನಕ್ಕೆ ಮಹಿಳೆಯರು ನೀಡಿರುವ ಕೊಡುಗೆಯನ್ನು ಹುಡುಕಿ ಹೊರಟರೆ ಮಹಿಳಾ ವಿಜ್ಞಾನಿಗಳ ದೊಡ್ಡ ಪಟ್ಟಿಯೇ ತಯಾರಾಗುತ್ತದೆ. ತಮ್ಮ ಕಾಲದ ಸಾಮಾಜಿಕ ಕಟ್ಟಲೆಯಲ್ಲೂ ಅವಕಾಶಗಳಿಲ್ಲದ ಅನಾನುಕೂಲತೆಯಲ್ಲೂ ಕಲಿಸುವವರಿಲ್ಲದ ಅಡೆತಡೆಯಲ್ಲೂ ವಿಜ್ಞಾನದತ್ತ ಆಕರ್ಷಿತರಾದ ಅಸಂಖ್ಯಾತ ಮಹಿಳೆಯರು ಅಜ್ಞಾತರಾಗಿಯೇ ಉಳಿದಿದ್ದಾರೆ. ವಿಜ್ಞಾನರಂಗಕ್ಕೆ ನುಗ್ಗಲು ಮಹಿಳೆಯರಿಗೆ ತೆರೆದ ಬಾಗಿಲುಗಳಿರಲಿಲ್ಲ, ಹೆದ್ದಾರಿಗಳಿರಲಿಲ್ಲ, ರಾಜಮಾರ್ಗಗಳಿರಲಿಲ್ಲ. ಜನರ ಅಜ್ಞಾನದ ಗೊಂಡಾರಣ್ಯದ ನಡುವೆ ಕತ್ತಲ ಕಾಲುಹಾದಿಯಲ್ಲಿ ಕೋಲ್ಕಿಂಚಿನಂತೆ ಮಿಂಚಿದ, ದಾರಿದೀಪವಾದ ಮಹಿಳಾ ವಿಜ್ಞಾನಿಗಳನ್ನು ತಿಳಿಯುವ ಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ. ಅಂದರೆ ಮಹಿಳಾ ವಿಜ್ಞಾನಿಗಳ ಇತಿಹಾಸವನ್ನು, ವಿಜ್ಞಾನರಂಗದ ಮೊದಲಗಿತ್ತಿಯರನ್ನು ಇಲ್ಲಿ ಪರಿಚಯಿಸಲಾಗಿದೆ.
©2025 Book Brahma Private Limited.