ಮಹಿಳೆ ಮತ್ತು ಆರೋಗ್ಯ

Author : ಕೆ. ಸರೋಜಾ

Pages 186

₹ 75.00




Year of Publication: 2001
Published by: ಪ್ರಸಾರಾಂಗ ಹಂಪಿ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ

Synopsys

‘ಮಹಿಳೆ ಮತ್ತು ಆರೋಗ್ಯ’ ಕೆ.ಸರೋಜ ಅವರ ಅಧ್ಯಯನ ಗ್ರಂಥವಾಗಿದೆ. ಸ್ತ್ರೀ ಆರೋಗ್ಯ ಸಮಸ್ಯೆಗಳನ್ನು ಅಧ್ಯಯನ ಮಾಡಿ ಬರೆದಿರುವ ಆಕರಗ್ರಂಥ. ಭಾರತೀಯ ಮಹಿಳೆಯ ಕುರಿತು ಇಲ್ಲಿ ಸಂಗ್ರಹಿಸಲಾದ ಅಂಕೆ ಅಂಶಗಳನ್ನು ಗಮನಿಸಿದಾಗ ಆಕೆ ಫೂರ್ಣ ಪ್ರಮಾಣದ ಮುಂದಿನ ಯೋಗ್ಯ ತಲೆಮಾರನ್ಫು ಸ್ಫಷ್ಟಿಸಬಲ್ಲಳೇ ಎಂಬ ಆತಂಕವಾಗುವುದು ಸಹಜ. ಅಂಥ ನ್ಯೂನ ಪೋಷಣೆ ಆಕೆಯದು.

About the Author

ಕೆ. ಸರೋಜಾ

ಡಾ. ಕೆ. ಸರೋಜಾ, ಮೈಸೂರಿನ ಮಾನಸಗಂಗೋತ್ರಿ ಹಾಗೂ ಧಾರವಾಡದ ಕಷಿ ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ICARನಿಂದ ಇವರಿಗೆ ಅತ್ಯುತ್ತಮ ಶಿಕ್ಷಕಿ ರಾಷ್ಟ್ರಪ್ರಶಸ್ತಿ ಬಂದಿದೆ. ತಮ್ಮ ದೀರ್ಘಾವಧಿಯ ಬೋಧನಾನುಭವದಲ್ಲಿ ವಿದ್ಯಾರ್ಥಿ ವರ್ಗದಲ್ಲಿ ಹೆಚ್ಚಿನವರಿಗೆ ಇಂಗ್ಲಿಷ್‌ನಲ್ಲಿರುವ ಅನೇಕ ಪರಿಕಲ್ಪನೆಗಳು (concepts) ಸ್ಪಷ್ಟವಾಗಿ ಪೂರ್ತಿ ತಿಳಿಯಲಾಗದೇ ಇರುವುದನ್ನು ಗಮನಿಸಿ ತರಗತಿಗಳಲ್ಲಿ ಅವುಗಳನ್ನೆಲ್ಲಾ ಕನ್ನಡದಲ್ಲಿ ಉದಾಹರಣಾ ಸಹಿತ ಚಿತ್ರವತ್ತಾಗಿ ಬೋಧಿಸುತ್ತಾ ಇವರು ವಿದ್ಯಾರ್ಥಿ ಸಮೂಹಗಳಲ್ಲಿ ಜನಪ್ರಿಯರಾಗಿದ್ದವರು. ತಾವು ಬೋಧಿಸುತ್ತಿದ್ದ ಮಾನವ ವಿಕಾಸ (Human Development) ಶಾಖೆಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಇಂದಿಗೂ ಅಧ್ಯಯನ ಮಾಡುತ್ತಲೇ ಇದ್ದಾರೆ. ಇವರ ಮೊದಲ ...

READ MORE

Reviews

ಹೊಸತು-ಜುಲೈ-2001

ಸ್ತ್ರೀ ಆರೋಗ್ಯ ಸಮಸ್ಯೆಗಳನ್ನು ಅಧ್ಯಯನ ಮಾಡಿ ಬರೆದಿರುವ ಒಂದು ಆಕರಗ್ರಂಥ. ಮಹಿಳೆಯರ ಆರೋಗ್ಯದ ವಿಷಯ ನಮ್ಮ ದೇಶಕ್ಕಷ್ಟೇ ಸೀಮಿತವಾಗಿರದೆ ವಿಶ್ವಮಟ್ಟದಲ್ಲಿಚಿಂತನೆ ನಡೆಸಬೇಕಾದಂತಹ ಒಂದು ಗಂಭೀರ ಸಮಸ್ಯೆ. ಆದರೂ ಸೀಮಿತ ವಲಯದಲ್ಲೆಂಬಂತೆ ಭಾರತೀಯ ಮಹಿಳೆಯ ಕುರಿತು ಇಲ್ಲಿ ಸಂಗ್ರಹಿಸಲಾದ ಅಂಕಿ ಅಂಶಗಳನ್ನು ಗಮನಿಸಿದಾಗ ಆಕೆ ಪೂರ್ಣ ಪ್ರಮಾಣದ ಮುಂದಿನ ಯೋಗ್ಯ ತಲೆಮಾರನ್ನು ಸೃಷ್ಟಿಸಬಲ್ಲಳೇ ಎಂಬ ಆತಂಕವಾಗುವುದು ಸಹಜ. ಅಂಥ ನ್ಯೂನ ಪೋಷಣೆ ಆಕೆಯದು.

Related Books