‘ಗ್ರಾಮೀಣ ಮಹಿಳೆಯರು’ ಲೇಖಕಿ ಎ.ಪಿ. ಮಾಲತಿ ಅವರು ರಚಿಸಿರುವ ಅಧ್ಯಯನಶೀಲ ಕೃತಿ. 1975ನೇ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಯುಕ್ತ ಪ್ರಕಟವಾದ ಕೃತಿ ಇದಾಗಿದ್ದು, ಗ್ರಾಮೀಣ ಮಹಿಳೆಯರ ಬದುಕಿನ ರೀತಿ-ನೀತಿಗಳನ್ನು ದಾಖಲಿಸಿದ್ದಾರೆ. ಮೂಲತಃ ಗ್ರಾಮೀಣ ಭಾಗದವರಾದ ಲೇಖಕಿ ಮಾಲತಿಯವರು ತಮ್ಮ ಸುತ್ತಲಿನ ಗ್ರಾಮ ಜೀವನದ ಬಗೆಯನ್ನು ಅಲ್ಲಿನ ಮಹಿಳೆಯ ಜವಾಬ್ದಾರಿ ಮತ್ತು ಪಾತ್ರಗಳ ಕುರಿತಾಗಿ ಅಧ್ಯಯನಾತ್ಮಕವಾಗಿ ಈ ಕೃತಿಯನ್ನು ರಚಿಸಿದ್ದಾರೆ.
©2024 Book Brahma Private Limited.