ಪತ್ರಕರ್ತೆ ಡಿ. ಯಶೋದಾ ಅವರ ಕೃತಿ-ರೆಕ್ಕೆ ಬಿಚ್ಚಿ ಹಾರೋಣ. ‘ ಮಹಿಳಾ ಅಸ್ಮಿತೆಯ ಅರಿವು’ ಎಂಬುದು ಕೃತಿಯ ಉಪಶೀರ್ಷಿಕೆ. ಮಹಿಳೆಯರ ಹಕ್ಕುಗಳ ಕುರಿತು ಅರಿವು ಹಾಗೂ ಪ್ರತಿಪಾದನಾ ಕೃತಿ ಇದು. ಮಹಿಳೆಯರು ಸ್ವಂತಿಕೆಯನ್ನು ಕಾಯ್ದುಕೊಳ್ಳಲು ಇವತ್ತಿನ ಸಂಕೀರ್ಣ ಸಂದರ್ಭದಲ್ಲಿ ಹೆಣಗುತ್ತಿರುವ ಚಿತ್ರಣವನ್ನು ಹಾಗೂ ಮಹಿಳೆಯರು ಸ್ವಾಭಿಮಾನದೊಂದಿಗೆ ಬದುಕಬೇಕು ಎಂಬ ಚಿತ್ರಣದೊಂದಿಗೆ ಪ್ರೇರಣೆಯಾಗಿ ಈ ಕೃತಿ ಮೂಡಿಬಂದಿದೆ.
©2024 Book Brahma Private Limited.