"ಮುಟ್ಟು" ಹೆಸರಿನ ಈ ಸಂಕಲನ ಹೆಣ್ಣನದ ಮುಟ್ಟು ಮತ್ತು ಸ್ಪಶ್ಯಾ ಸ್ಪೃಶ್ಯತೆಯ ಮರ್ಮಸ್ಪರ್ಶದ ಎರಡು ಸ್ತರಗಳ ಸಮಷ್ಟಿಪ್ರಜ್ಞೆ ಹುಟ್ಟು ಹಾಕುತ್ತದೆ. ಕನ್ನಡದ ಮಹತ್ವದ ಕತೆಗಾರ ರಾಘವೇಂದ್ರ ಖಾಸನೀಸರ ಕಥನ ಪರಂಪರೆಯನ್ನು ಮುಂದುವರೆಸಿದಂತಿರುವ ಇಲ್ಲಿನ ಕತೆಗಳಲ್ಲಿ, ಕಡಕೋಳ ಅವರನ್ನು ತೀವ್ರವಾಗಿ ಪ್ರಭಾವಿಸಿರುವ ಮಡಿವಾಳಪ್ಪನ ಮತ್ತು ಸಮಕಾಲೀನರ ತತ್ವಪದಗಳ ಮಿಂಚಿನಂತಹ ಸಾಲುಗಳು ಸಾಂದರ್ಭಿಕವಾಗಿ ಪ್ರಕಟವಾಗುತ್ತ ಕತೆಗಳಿಗೆ ತಾತ್ವಿಕ ಆಯಾಮವನ್ನು ಒದಗಿಸುತ್ತವೆ. "ಧರೆಯ ಭೋಗವ ನೀಗಿ ವರಮೋಕ್ಷವ ಪಡೆಯಲು ಬರ್ತೀರಾ ಇಲ್ಲೇ ಇರ್ತೀರಾ" ಮುಂತಾದ ಸಾಲುಗಳು ಕತೆಯ ಸಂದರ್ಭಗಳನ್ನು ಮೀರಿ ಮಾನವ ಬದುಕಿನ ಆತ್ಯಂತಿಕ ಸತ್ಯವನ್ನು ಹೇಳುವ ಮಾರ್ಮಿಕ ಪದಗಳೂ ಆಗಿವೆ ಎಂದು ದಾದಾಪೀರ್ ನವಿಲೇಹಾಳ್ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.