`ಮಾತೃನಂದಿನಿ’ ತಿರುಮಲಾಂಬಾ (ನಂಜನಗೂಡು ತಿರುಮಲಾಂಬ) ಅವರ ಗ್ರಂಥಕೃತಿಯಾಗಿದೆ. ತಾಯಿಯ ಕುರಿತ ಹಲವಾರು ವಿಚಾರಗಳನ್ನು ಇಲ್ಲಿ ಕಾಣಬಹುದಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಅರಿವಿಲ್ಲದ ನನ್ನಿಂದ, ಕೇವಲ ನನ್ನ ಸ್ವಶಕ್ತಿ-ಚಾತುರ್ಯಗಳಿಂದ ಗುರುತರದ ಸಮಾಜಪರವಾದ ಹಲವು ವಿಷಯ ವಿಚಾರಗಳನ್ನು ಪ್ರತಿಪಾದಿಸುವ ಈ ಗ್ರಂಥವು ರಚಿಸಲ್ಪಟ್ಟಿತೆಂದು ಹೇಳಿಕೊಳ್ಳಲಾರೆನು. ಎಂದರೆ, ಇದು ಅನ್ಯಭಾಷಾಗ್ರಂಥ ಭಾಷಾಂತರೀಕರಣವೆಂದು ಮಾತ್ರ ತಿಳಿಯಬಾರದು. ಏಕೆಂದರೆ, ದೇಶಭಾಷೆಯೊಂದರಲ್ಲಿಯೇ ದೃಷ್ಟಿಯಿಟ್ಟು, ಅನ್ಯ ಭಾಷಾ ಪರಿಶ್ರಮಕ್ಕವಕಾಶವನ್ನೇ ಕಂಡವಳಲ್ಲದ ನಾನು, ಭಾಷಾಂತರಿಸುವುದು ಇಲ್ಲವೇ ಅವುಗಳಲ್ಲಿಯ ವಿಷಯಗಳನ್ನು ಸಂಗ್ರಹಿಸುವುದು ಹೇಗೆ? ಇಷ್ಟು ಮಾತ್ರ ಹೇಳಬಲ್ಲೆನು. ಗಂಥಾವತರಣದ ಪ್ರೇರಣೆಗೂ, ಪ್ರತಿಭೆಗೂ, ಕಲ್ಪನೆಗೂ, ಮತ್ತು ಮೇಧಾಶಕ್ತಿಗೂ, ಆ ನಮ್ಮ ಮಾತೃದೈವವೇ ಕಾರಣ-ಕಾರ್ಯಕರ್ತ್ರಿಯಾಗಿರುವಳೆಂದೂ, ಆ ನಮ್ಮ ತಾಯಿ, ಯಾವರೀತಿಯಲ್ಲಿ, ಯಾವರೂಪದಲ್ಲಿ, ಯಾವದಾರಿಯಲ್ಲಿ, ಮತ್ತು ಎಂತಹ ವಾಕ್ಸರಣೆಯಲ್ಲಿ, ಯಾವಯಾವಕಾಲದಲ್ಲಿ ಹೇಗೆ ಹೇಗೆ ಪ್ರೇರೇಪಿಸಿದಳೋ ಹಾಗೆಯೇ, ಅವಳ ಪ್ರೇರಣೆಯಾದಂತೆಯೇ, ಅವಳ ಕೃಪಾವಲೋಕನವೊಂದನ್ನೇ ಮುಖ್ಯಾವಲಂಬವಾಗಿಟ್ಟು, ಅವಳಿಂದಳೆದೊಯ್ಯಲ್ಪಟ್ಟ ದಾರಿಯಲ್ಲಿ ನಡೆವುದೇ ಮುಖ್ಯ ಕರ್ತವ್ಯವೆಂದೂ ನಂಬಿರುವ ಮೇಲಿನ ಜಡಭಕ್ತಿಯೊಂದರಿಂದಲೇ ಈ ಗ್ರಂಥವು ವಿಳಿತವಾಗಿದೆ ಎಂದಿದ್ದಾರೆ ಇಲ್ಲಿ ಲೇಖಕಿ.
©2025 Book Brahma Private Limited.