ಪತ್ರಕರ್ತ ಪ್ರಭುಲಿಂಗ ನೀಲೂರೆ ಅವರು ಕಿಶೋರಿಲಾಲ್ ಅಹರವಾಲ್, ಎಚ್.ವಿ. ಬೌದ್ಧ ಅವರು ಹಿಂದಿಯಲ್ಲಿ ಬರೆದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಕೃತಿ-ತ್ಯಾಗಮಯಿ ರಮಾಬಾಯಿ ಅಂಬೇಡ್ಕರ್. ಡಾ.ಬಿ.ಆರ್.ಅಂಬೇಡ್ಕರ್ ಎಂಬ ಮಹಾವೃಕ್ಷಕ್ಕೆ ತಾಯಿ ಬೇರಾದವರು ರಮಾಬಾಯಿ. ಅವರು ಅನುಭವಿಸಿದ ನೋವು, ಹಸಿವು, ಬಡತನ, ನಿಂದನೆ, ಮಕ್ಕಳ ಸಾವಿನ ಆಕ್ರಂದನ ಜಗತ್ತಿನ ಯಾವ ಮಹಾಪುರುಷನ, ಮಹಾತ್ಮನ ಪತ್ನಿ ಅನುಭವಿಸಿದ ಉದಾಹರಣೆಗಳಿಲ್ಲ. ಆ ತಾಯಿಯಲ್ಲದೆ ಇನ್ನಾರೂ ಆ ಕ್ರೂರ ಬದುಕನ್ನು ಸಹಿಸಲಾಗುತ್ತಿರಲಿಲ್ಲವೆನೋ ? ಜಗತ್ತಿನ ಯಾವ ಮಹಾನ್ ನಾಯಕರಿಗೂ ಸಿಗದಂತಹ ತ್ಯಾಗಮಯಿ ಸತಿ ಅಂಬೇಡ್ಕರ್ ಅವರಿಗೆ ಲಭಿಸಿದ್ದೇ ಒಂದು ರೀತಿಯಲ್ಲಿ ನಮ್ಮ ದೇಶಕ್ಕೆ ಸಂವಿಧಾನ ರಚಿಸಿ ಆ ಮೂಲಕ ಸಮಸಮಾಜ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ಕಾರಣವೂ ಆಯಿತು ಎನ್ನಬಹುದು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಯಶಸ್ವಿ ಹೋರಾಟದ ಹಿಂದೆ ಪತ್ನಿ ರಮಾಬಾಯಿ ಅಂಬೇಡ್ಕರ್ ಅವರ ಪಾತ್ರ ಹಿರಿದು. ಪತಿಯನ್ನು ಸೂರ್ಯನಾಗಿಸುವ ಭರದಲ್ಲಿ ತನ್ನನ್ನೇ ಸುಟ್ಟುಕೊಳ್ಳುತ್ತ ಬದುಕಿದ ಮಹಾಮಾತೆಯ ಸಮಗ್ರ ಜೀವನ ಚಿತ್ರಣ ಈ ಕೃತಿಯಲ್ಲಿದೆ ಎಂದು ಅನುವಾದಕರು ಹೇಳಿದ್ದಾರೆ.
©2024 Book Brahma Private Limited.