ಜೆ ಎಸ್ ಚಾರ್ಜರು ಬರೆದ ಎಂ ಎಸ್ ಸುಬ್ಬುಲಕ್ಷ್ಮಿ ಅವರ ಜೀವನಗಾಥೆ ಪ್ರಕಟವಾದದ್ದು 2007ರಲ್ಲ, ಒಂದು ದಶಕದ ನಂತರ ಜಯಪ್ರಕಾಶ್ ನಾರಾಯಣ ಈ ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಾರೆ. ಇದು ಸಂಗೀತ ಪ್ರೇಮಿಗಳೆಲ್ಲರಿಗೂ ಸಂತಸದ ಸಂಗತಿ. ಸಾಮಾನ್ಯವಾಗಿ ಪತ್ರಿಕೆಗಳಲ್ಲಿ ಮತ್ತು ಸ್ಮರಣ ಸಂಚಿಕೆಗಳಲ್ಲ ಪ್ರಕಟವಾಗುವ ಲೇಖನಗಳು ಸಂಗೀತಗಾರರನ್ನು ಹಾಡಿ ಹೊಗಳುತ್ತವೆಯೇ ಹೊರತು ಕಲೆಯ ಬಗೆಗಿನ ನಮ್ಮ ಅರಿವನ್ನು ಹಿಗ್ಗಿಸುವುದಿಲ್ಲ. ಹಳೆ ಮೈಸೂರು ಪ್ರಾಂತದ ಜನರಿಗೆ ಎಂಎಸ್ ಅವರ ಸಂಗೀತ ಎಂದರೆ ಉತ್ಕೃಷ್ಟತೆಗೆ ಇನ್ನೊಂದು ಹೆಸರು. ಸಾಮಾನ್ಯರಿಗೂ ಕ್ಲಾಸಿಕಲ್ ಕಲೆಗೂ ಸಂಬಂಧವೇ ಇಲ್ಲ ಎಂಬಂಥ ಮಾತು ಆಗ ಕೇಳಬರುತ್ತಿರಲಿಲ್ಲ. ಇಪ್ಪತ್ತನೆಯ ಶತಮಾನದ ಸಾಮಾಜಿಕ ಮತ್ತು ರಾಜಕೀಯ ಸೂಕ್ಷ್ಮಗಳನ್ನು ಸಂಗೀತದ ದೃಷ್ಟಿಯಿಂದ ನೋಡುವ ಇಲ್ಲಯ ಪಲ ಒಳನೋಟದಿಂದ ಕೂಡಿದೆ. ಎಂಎಸ್ ಅವರ ಸಿನಿಮಾ ವೃತ್ತಿಯ ಸೋಲು-ಗೆಲುವು, ಹಿಂದುಸ್ತಾನಿ ಸಂಗೀತಗಾರರ ಜೊತೆಗಿನ ಸ್ನೇಹದ ಒಡನಾಟ, ಇವೆಲ್ಲವನ್ನೂ ಈ ಪುಸ್ತಕ ಕಣ್ಣಿಗೆ ಕಟ್ಟುವಂತೆ ಹಿಡಿದಿಡುತ್ತದೆ. ಇಂಥ ಪುಸ್ತಕವಿಲ್ಲದೆ ಎಷ್ಟೋ ಸ್ವಾರಸ್ಯದ ವಿಷಯಗಳು ಇತಿಹಾಸದಲ್ಲಿ ಮಸುಕಾಗಿ ಹೋಗುತ್ತವೆ. ಎಂಎಸ್ ಆಸ್ತಿಕರಾಗಿ, ಭಕ್ತಿಪರವಶರಾಗಿ ಹಾಡುತ್ತಿದ್ದರು ಎಂಬುದು ದಿಟ, ಆದರೆ ಅಂಥ ದಿವ್ಯ ಗಾಯನದ ಹಿಂದೆಯೂ ಎಲ್ಲರಂತೆ ಅವರು ಕಷ್ಟಕಾರ್ಪಣ್ಯಗಳನ್ನು ಎದುರಿಸಿದ್ದರು, ಗೆದ್ದಿದ್ದರು. ಈ ಹೋರಾಟವನ್ನು ಮನದಟ್ಟಾಗುವಂತೆ ಹೇಳುವ ಪುಸ್ತಕ ಇದು. ಸಂಗೀತದ ಬಗ್ಗೆ ಬರೆಯುವುದು ಸುಲಭವಲ್ಲ. ಕಲೆಯ ಗ್ರಹಿಕೆಯ ಜೊತೆಗೆ ಅಲ್ಲ ಕಂಡ ಕೇಆದ ವಿಷಯಗಳನ್ನು ಭಾಷೆಗೆ ಒಗ್ಗಿಸುವ ಕೌಶಲ್ಯ ಇರಬೇಕು. ಸಂಶೋಧನೆ ಮಾಡುವ ತಾಳ್ಮೆ, ಮನಸ್ಸಿರಬೇಕು. ಎಂಎಸ್ ಪುಸ್ತಕ ಬರೆಯುವಾಗ ಜಾರ್ಜ್ ಹತ್ತು ವರ್ಷ ತಯಾರಿ ಮಾಡಿದರಂತೆ. ಈ ಎಲ್ಲ ಅಂಶಗಳ ಜೊತೆಗೆ ಹಾರ್ಟರ ಬರವಣಿಗೆಯಲ್ಲ, ಮತ್ತು ಈಗ ಜಯಪ್ರಕಾಶ ನಾರಾಯಣರ ಅನುವಾದದಲ್ಲಿ ಕಾಣುವುದು ಸಂಗೀತ ಬಗೆಗಿನ ಉತ್ತಟ ಪ್ರೀತಿ ಪತ್ರಿಕೋದ್ಯಮದಲ್ಲಿ ಜಾರ್ಜ್ ಅವರದು ದೊಡ್ಡ ಹೆಸರು, ಅವರ ಹಲವು ಆಸಕ್ತಿಗಳಲ್ಲಿ ಕರ್ನಾಟಕ ಸಂಗೀತವೂ ಒಂದು. ಅಚಕನ್ನಡದಲ್ಲೇ ಬರೆದಷ್ಟು ಹಿತವಾಗಿ ಸಾಗುವ ಅನುವಾದ ಇದು. ನಮ್ಮ ಸಂಸ್ಕೃತಿಗೆ ಈ ಪುಸ್ತಕದಿಂದ ದೊಡ್ಡ ಉಪಕಾರವಾಗಿದೆ ಎಂದು ಪುಸ್ತಕದ ಮುನ್ನುಡಿಯಲ್ಲಿ ಎಸ್ ಆರ್ ರಾಮಕೃಷ್ಣ ಅವರು ಹೇಳಿದ್ದಾರೆ.
©2024 Book Brahma Private Limited.