ಹಿರಿಯ ಲೇಖಕ ತಥಾಗತ ರಾಯ್ ಅವರು ಇಂಗ್ಲಿಷಿನಲ್ಲಿ ರಚಿಸಿದ ಕೃತಿಯನ್ನು ಸಾಹಿತಿ-ಅನುವಾದಕ ಬಿ.ಎಸ್. ಜಯಪ್ರಕಾಶ ನಾರಾಯಣ ಅವರು ಕನ್ನಡಕ್ಕೆ ಅನುವಾದಿಸಿದ್ದೇ-‘ಶಾಮಪ್ರಸಾದ್ ಮುಖರ್ಜಿ. ಸಮಗ್ರ ಜೀವನ ಚರಿತ್ರೆಯನ್ನು ಈ ಕೃತಿ ಕಟ್ಟಿಕೊಡುತ್ತದೆ. ಕಲಕತ್ತಾ ಮೂಲದ ಶಾಮಪ್ರಸಾದ್ ಮುಖರ್ಜಿ ಅವರು (ಜನನ: 6 ಜುಲೈ 1901, ಮರಣ: 23 ಜೂನ್ 1953) ಶಿಕ್ಷಣ ತಜ್ಞ, ನ್ಯಾಯವಾದಿ. ಪ್ರಧಾನಿ ಜವಾಹರಲಾಲ ನೆಹರು ಅವರ ಸಚಿವ ಸಂಪುಟದಲ್ಲಿ ಕೈಗಾರಿಕೋದ್ಯಮ ಖಾತೆಯ ಸಚಿವರಾಗಿದ್ದರು. ಮುಂದೆ ಅವರು ಸಂಪುಟದಿಂದ ಹೊರಬಂದು, ಭಾರತೀಯ ಜನಸಂಘ ಎಂಬ ರಾಜಕೀಯ ಪಕ್ಷದ ಸ್ಥಾಪಿಸಿದರು. ಈ ಪಕ್ಷವೇ ನಂತರ ಭಾರತೀಯ ಜನತಾ ಪಕ್ಷವಾಯಿತು. ಶಾಮಪ್ರಸಾದ್ ಮುಖರ್ಜಿ ಅವರ ರಾಜಕೀಯ ಪ್ರವೇಶ, ಪಕ್ಷ ಸ್ಥಾಪನೆ ಅದರ ಬೆಳವಣಿಗೆಯಲ್ಲಿ ಅವರ ಪಾತ್ರ, ಪ್ರಖರ ರಾಷ್ಟ್ರೀಯತೆ ಇತ್ಯಾದಿ ಸಂಗತಿಗಳನ್ನು ಒಳಗೊಂಡ ಕೃತಿ ಇದು.
©2024 Book Brahma Private Limited.