ಲೇಖಕ ವಿಶ್ವಾಸ್ ಭಾರಧ್ವಾಜ್ ಅವರು ಕನ್ನಡಕ್ಕೆ ಅನುವಾದಿಸಿರುವ ಕೃತಿ ʼಸಾಯಿ ಸ್ಮೃತಿʼ . ಕಲಿಯುಗದ ದಿವ್ಯ ಅವತಾರ ಪುರುಷ, ಚಮತ್ಕಾರಿ ಯೋಗಿರಾಜ ಶಿರಡಿಯ ಸಾಯಿಬಾಬಾ ಅವರ ಪವಾಡಗಳ ಕುರಿತು ಕೇಳುತ್ತಲೇ ಇರುತ್ತೇವೆ. ನೊಂದ ಜನಸಮುದಾಯದ ಮೇಲಿನ ಬಾಬಾರ ಕಾರುಣ್ಯದ ಕಡಲು ಮನೆಮಾತಾಗಿದೆ. ಬಾಬಾರ ನಿಷ್ಕಲ್ಮಷ ಪ್ರೇಮ, ಅನನ್ಯ ಸೇವಾ ಮನೋಭಾವನೆ ಮತ್ತು ಅತ್ಯುತ್ಕೃಷ್ಟ ಆಧ್ಯಾತ್ಮಿಕ ಚಿಂತನೆಗಳನ್ನು ಕೆಲವೇ ಶಬ್ಧಗಳಲ್ಲಿ ಕೆಲವೇ ವಾಕ್ಯಗಳಲ್ಲಿ ಹಿಡಿದಿಡುವುದು ಕುಂಭದ್ರೋಣ ಮಳೆಯನ್ನು ಬೊಗಸೆಯಲ್ಲಿ ಹಿಡಿದಂತೆ. ಅಸ್ತಿತ್ವ ನಂಬುವ ಶ್ರದ್ಧಾವಂತ ಭಕ್ತರಿಗೆ ಈ ಕೃತಿಯು ಆಪ್ತವಾಗಿದೆ. ಸಾಯಿ ಭಗವಾನ್‌ರ ಸಪ್ತ ಪವಾಡಗಳು, ಆರತಿ ಸಾಯಿಗೀತೆಗಳು ಹಾಗೂ ಸಾಯಿಸ್ಮರಣೆಯ ಭಜನೆಗಳನ್ನು ಇಲ್ಲಿ ಕಾಣಬಹುದು. ಈ ಸಣ್ಣ ಪುಸ್ತಕದಲ್ಲಿ ಬಾಬಾ ಸ್ಮರಣೆ ಮಾಡುವ ಚಿಕ್ಕ ಪ್ರಯತ್ನ ಮಾಡುತ್ತಿದ್ದೇನೆ ಎಂಬುದು ಲೇಖಕರ ಅಭಿಪ್ರಾಯ.
©2024 Book Brahma Private Limited.