ರಾಷ್ಟ್ರತಪಸ್ವಿ ಶ್ರೀಗುರೂಜಿ ವ್ಯಕ್ತಿ ಚಿತ್ರಣ ಕೃತಿಯ ಮೂಲ ಹಿಂದಿಯಾಗಿದ್ದು, ರಂಗಾ ಹರಿ ಅವರು ರಚಿಸಿದ್ದಾರೆ. ಇದನ್ನು ಕನ್ನಡದಲ್ಲಿ ಚಂದ್ರಶೇಖರ ಭಂಡಾರಿ ಅವರು ಮಾಡಿದ್ದಾರೆ. ಈ ಕೃತಿಯಲ್ಲಿ ಸಂಘದ ದ್ವಿತೀಯ ಸರಸಂಘಚಾಲಕ ಶ್ರೀ ಗುರೂಜಿಯವರ ಜನ್ಮ ಶತಮಾನೋತ್ಸವ ವರ್ಷದಲ್ಲಿ ಅವರ ಸಮೃದ್ಧ ವೈಚಾರಿಕ ಸಂಪತ್ತಿನ ಕೂಲಂಕಷ ತಪಾಸಣೆ ನಡೆಸಿ “ಶ್ರೀ ಗುರೂಜಿ ಸಮಗ್ರ” ಎಂಬ ಹೆಸರಲ್ಲಿ ರಚಿಸಲಾದ 12 ಸಂಪುಟಗಳು ಶ್ರೀ ರಂಗಾ ಹರಿ ಅವರ ಲೋಕೋತ್ತರ ಕೊಡುಗೆಯಾಗಿ ಸಾರಸ್ವತ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ. ಅದರ ಉಪಲಬ್ಧಿಯಾಗಿ ಹಿಂದಿಯಲ್ಲಿ ಅವರು ಬರೆದಿರುವ ಶ್ರೀ ಗುರೂಜಿಯವರ ಜೀವನ ಚರಿತ್ರೆಯು ಅವರ ಇತ್ತೀಚಿನ ಕೃತಿಯಾಗಿದೆ ಎಂದು ಕೃತಿಯ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.
©2024 Book Brahma Private Limited.