ಮಹಾತ್ಮ ಗಾಂಧೀಜಿ ಅವರು ತಮ್ಮ ಜೊತೆಗಾರರ ಬಗ್ಗೆ ಬರೆದಿದ್ದದನ್ನು ಲೇಖಕ ಸಿದ್ಧವನಮಹಳ್ಳಿ ಕೃಷ್ಣಶರ್ಮರು ಕನ್ನಡಕ್ಕೆ ಅನುವಾದಿಸಿದ್ದೇ ಈ ಕೃತಿ-ನನ್ನ ಜೊತೆಗಾರರು. ಮಗನಲಾಲ್ ಗಾಂಧೀ, ಲಾಲಾ ಲಜಪತರಾಯ್, ವಿನೋಬಾ ಭಾವೆ, ಕಿಶೋರಿ ಲಾಲ್, ದೀನಬಂಧು, ಹಕೀಂ ಸಾಹೇಬ ಅಜಮಲಖಾನ್, ಸುರೇಂದ್ರನಾಥ ಬ್ಯಾನರ್ಜಿ, ಆಶ್ರಮ ಭಜನೆ, ಸೇಠ್ ಜಮನಾಲಾಲ್ ಬಜಾಜ್, ಮಹಾತ್ಮ ಮುನಷಿ ರಾಮ, ಛೋಟೇಲಾಲ ಜೈನ್, ರಾಯಚಂದ್ ಭಾಯಿ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವರೆಲ್ಲರೂ ತಮ್ಮ ವ್ಯಕಿತ್ವದಿಂದ ಗಾಂಧೀಜಿಯ ಮೇಲೆ ಪರಿಣಾಮ ಬೀರಿದವರು. ಇಂತಹವರ ಚರಿತ್ರೆಯೂ ಸೇರಿದಂತೆ ಈ ಮಹನೀಯರ ಬಗ್ಗೆ ಗಾಂಧೀಜಿ ಬರೆಯಲು ಕಾರಣಗಳೂ ಸಹ ಈ ಕೃತಿಯಲ್ಲಿ ಅಡಕವಾಗಿವೆ. ಒಬ್ಬೊಬ್ಬರ ಚರಿತ್ರೆಯು ಮಾದರಿಯಾಗಿದೆ.
©2024 Book Brahma Private Limited.