‘ಲಲಿತ ವಿಸ್ತರ’ ಗೌತಮ ಬುದ್ಧನ ಜೀವನಗಾಥೆ. ಸಂಸ್ಕೃತದಲ್ಲಿ ರಚಿತವಾದ ಈ ಚರಿತ್ರೆಯನ್ನು ತಿರುಮಲ ರಾಮಚಂದ್ರ ಮತ್ತು ಬಾಲುಸು ವೆಂಕಟರಮಣಯ್ಯ ಅವರು ತೆಲುಗಿಗೆ ಅನುವಾದಿಸಿದ್ದರು, ಆನಂತರದಲ್ಲಿ ಡಾ. ಆರ್. ಶೇಷಶಾಸ್ತ್ರಿ ಕನ್ನಡೀಕರಿಸಿದ್ದಾರೆ.
ಲಲಿತ ವಿಸ್ತರ ಗೌತಮಬುದ್ಧನ ಜೀವನ ಚರಿತ್ರೆ, ಸರಳವಾದ, ಮಿಶ್ರಸಂಸ್ಕೃತ ಭಾಷೆಯಲ್ಲಿ ರಚಿತವಾಗಿರುವ ಸುಂದರ ನಿರೂಪಣೆಯನ್ನು ಹೊಂದಿದೆ. ಬೌದ್ಧ ಪರಿಭಾಷೆಯಲ್ಲಿ ಇದು ವೈಪುಲ್ಯಸೂತ್ರಗಳಲ್ಲಿ (ದೀರ್ಘ ಧರ್ಮಗ್ರಂಥಗಳು) ಒಂದು. ಕೆಲವು ವಿದ್ವಾಂಸರು ಇದು ಮಹಾಯಾನಪಂಥಕ್ಕೆ ಸಂಬಂಧಿಸಿದ್ದು ಎಂದು ಹೇಳುತ್ತಾರೆಯಾದರೂ ವಸ್ತುಸ್ಥಿತಿ ವಿಭಿನ್ನ. ಪಾಲಿ ಮತ್ತು ಸಂಸ್ಕೃತ ವಿನಯಪಿಟಕ ಗ್ರಂಥಗಳಲ್ಲಿ ಅಲ್ಲಲ್ಲಿ ದೊರಕುವ ಬುದ್ಧನ ಜೀವನದ ವೃತ್ತಾಂತದ ಭಾಗಗಳೇ ಮುಂದೆ ರಚಿತವಾದ ಜೀವನ ಚರಿತ್ರೆಗಳಿಗೆಲ್ಲಾ ಮೂಲಾಧಾರ. ಈ ಕೃತಿಯಲ್ಲಿಯೂ ಬುದ್ಧನ ಜೀವನಚರಿತ್ರೆಯನ್ನು ಸವಿಸ್ತಾರವಾಗಿ, ಸರಳ ಭಾಷೆಯಲ್ಲಿ ಬರೆಯಲಾಗಿದೆ.
©2024 Book Brahma Private Limited.