ಮರಾಠಿಯ ಶ್ರೇಷ್ಠ ಸಂತರಲ್ಲಿ ಒಬ್ಬನಾದ ಜ್ಞಾನೇಶ್ವರಿಯ ಜ್ಞಾನದೇವನ ಅನುಭವಾಮೃತದಂತಹ ಗಹನವಾದ ಕೃತಿ ಹಾಗೂ ಅದರ ಬಗ್ಗೆ ಖರ್ಷೀಕರ ಶಾಸ್ತ್ರಿಯವರ ಸರಳ ಪ್ರವಚನಗಳ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ. ಗೌಡಪಾದ, ಶಂಕರ ಹಾಗೂ ಜ್ಞಾನದೇವರ ನಡುವೆ ತೋರಿರುವ ಸಾಮ್ಯತೆಗಳು ಜ್ಞಾನ ದೇವನ ವ್ಯಕ್ತಿತ್ವದ ಅಗಾಧತೆಯನ್ನು ಸೂಚಿಸುತ್ತದೆ. ಅನುಭವಾಮೃತ ರಹಸ್ಯದ ಮೇಲೆಯೇ ಪಿ.ವೈ. ದೇಶಪಾಂಡೆಯವರು ತಮ್ಮ ಮೂರು ಸಂಪುಟಗಳಲ್ಲಿ ಹೊರತಂದ ಅನುಭವಾಮೃತ ರಸರಹಸ್ಯದ ವಿಷಯವನ್ನೂ, ಜ್ಞಾನೇಶ್ವರಿ, ಅನುಭವಾಮೃತ, ಅಭಂಗಗಳು ಇವುಗಳಿಂದ ಆಯ್ದ ಭಾಗಗಳನ್ನು ಈ ಕೃತಿಯೂ ಒಳಗೊಂಡಿದೆ. ಈ ಕೃತಿಯನ್ನು ಜಿ.ಕೆ.ರವೀಂದ್ರ ಕುಮಾರ್ ರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
©2024 Book Brahma Private Limited.