‘ಕಡವ ಶಂಭುಶರ್ಮ ಕೃತಿ ಸಂಚಯ-3’ ನಾಥ ಪಂಥದ ಅನುವಾದಿತ ಕೃತಿ. ಪಂಡಿತ ಪರಂಪರೆಯ ಪ್ರತಿನಿಧಿ ಕಡವ ಶಂಭುಶರ್ಮರದು ಪ್ರಯೋಗಶೀಲ ಮನಸ್ಸು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕನ್ನು ಶ್ರೀಮಂತಗೊಳಿಸಿದ ಕಡವ ಅವರದು ಬಹುಮುಖಿ ವ್ಯಕ್ತಿತ್ವ. 1950ರ ಸುಮಾರಿನಲ್ಲಿ ಅಪಘಾತದಲ್ಲಿ ಕಾಲುಕಳೆದುಕೊಂಡರು ಈ ವೇಳೆ ಅತ್ಯಂತ ಕುಗ್ಗಿಹೋಗಿದ್ದ ಅವರಿಗೆ ನಾಥಪಂಥದ ಗುರುಗಳೊಂದಿಗೆ ಸಂಪರ್ಕವಾಯಿತು. ಇದು ಅವರ ಆತ್ಮಶಕ್ತಿಯನ್ನು ಹೆಚ್ಚಿಸಿತು. ನಾಥಪಂಥದ ಹಲವು ಮಹತ್ವದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದರು. ಅವರ ಎಲ್ಲ ಅನುವಾದಿತ ಕೃತಿಗಳನ್ನು ಡಾ. ಶ್ರೀಧರ ಎಚ್.ಜಿ ಅವರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.
©2024 Book Brahma Private Limited.