ಸನಾತನ ಧರ್ಮದ ಸಾರಾಂಶವು, ನಿಜವಾದ ಅರ್ಥದಲ್ಲಿ ಜಗದ್ಗುರುಗಳಾಗಿದ್ದ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳವರ ಉಪದೇಶಗಳು ಹಲವೆಡೆ ಚದುರಿಹೋಗಿದ್ದು, ಅವುಗಳನ್ನು ಒಟ್ಟುಗೂಡಿಸಿ ಈ ಕೃತಿಯಲ್ಲಿ ಕೊಟ್ಟಿದ್ದಾರೆ. ಧರ್ಮ ಹೇಗೆ ಅನುಷ್ಠಾನಧರ್ಮವಾಗಿದೆ, ಇಚ್ಛಾನಿಗ್ರಹದಿಂದ ನಮ್ಮ ಸಂಕೀರ್ಣ ಸ್ವಭಾವವನ್ನು ಹೇಗೆ ಹತೋಟಿಯಲ್ಲಿಟ್ಟುಕೊಂಡು ಅದನ್ನು ಸದುಪಯೋಗಪಡಿಸಿಕೊಳ್ಳಬಹುದು. ಜೀವನದಲ್ಲಿ ನಮ್ಮ ಹೊಣೆಗಾರಿಕೆ ಎಂತಹುದು, ಕರ್ಮವಾದದ ಆವಶ್ಯಕತೆ, ಜ್ಞಾನಾರ್ಜನೆಯು ಪರಮತತ್ತ್ವವನ್ನು ಅರಿಯಲು ಹೇಗೆ ಸಹಾಯಮಾಡುತ್ತದೆ, ಈ ಮೊದಲಾದ ಮಾರ್ಗದರ್ಶಿ ಸೂತ್ರಗಳನ್ನು ಶ್ರೀಗಳವರು ಅನುಗ್ರಹಪೂರ್ವಕವಾದ ವಿವರಣೆಯನ್ನು ನೀಡಿದ್ದಾರೆ. ಈ ಕೃತಿಯನ್ನು ಟಿ.ಎಸ್.ವೆಂಕಣ್ಣಯ್ಯ ರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
©2024 Book Brahma Private Limited.