ಭಾರತವಷ್ಟೇ ಅಲ್ಲದೆ ವಿದೇಶದ ಇಬ್ಬರು ಮಹಾ ಚೈತನ್ಯಗಳನ್ನೂ ಒಳಗೊಂಡಂತೆ ಒಟ್ಟು ಏಳುಜನ ಶ್ರೇಷ್ಠ ಚೈತನ್ಯಗಳ ಬಗ್ಗೆ ಮಾಹಿತಿಯನ್ನು ಈ ಕೃತಿಯಲ್ಲಿ ನೀಡಲಾಗಿದೆ. ಆಳ್ವಾರರುಗಳಲ್ಲಿ ಹಿರಿಯರಾದ ನಮ್ಮಾಳ್ವಾರ್, ವಿಶ್ವದಲ್ಲಿಯೇ ಅಪ್ರತಿಮ ತತ್ತ್ವಶಾಸ್ತ್ರಜ್ಞರೆಂದು ಅರ್ಹವಾಗಿ ಪ್ರಶಂಸಿಸಲ್ಪಡುವ ಶ್ರೀ ಶಂಕರರು, ಶ್ರೀ ವೈಷ್ಣವ ತತ್ತ್ವದ ಹಿರಿಯ ಪ್ರತಿಪಾದಕರಾಗಿದ್ದ ವೇದಾಂತ ದೇಶಿಕರು, ಗುರು ರಾಮಾನಂದರ ಶಿಷ್ಯರಾಗಿ ಕಂದಾಚಾರಗಳ ವಿರುದ್ಧ ತಿರುಗಿಬಿದ್ದ ಕಬೀರರು, ಮುಸಲ್ಮಾನ್ ಆಕ್ರಮಣಕಾರರನ್ನು ಓಡಿಸಿ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಬೇಕೆಂದು ಶ್ರಮಿಸಿದ ಛತ್ರಪತಿ ಶಿವಾಜಿ, ಧಾರ್ಮಿಕ ನೈತಿಕ ವಿಷಯಗಳ ಉಪನ್ಯಾಸಕ, ಕವಿ ಆರ್. ವಿ. ಎಮರ್ಸನ್ ಮತ್ತು ಋಷಿ ಸದೃಶ ರಷ್ಯನ್ ಲೇಖಕ ಲಿಯೋ ಟಾಲ್ಸ್ಟಾಯ್ ಮೊದಲಾದ ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಲೇಖಕರು ಈ ಕೃತಿಯಲ್ಲಿ ಮಾಡಿದ್ದಾರೆ.
©2025 Book Brahma Private Limited.