ನಮ್ಮಧರ್ಮ

Author : ಲಕ್ಷ್ಮೀನರಸಿಂಹಶಾಸ್ತ್ರಿ ಹುರಗಲವಾಡಿ

Pages 66

₹ 10.00




Year of Publication: 2010
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ಸಾರಾಂಶವು, ನಿಜವಾದ ಅರ್ಥದಲ್ಲಿ ಜಗದ್ಗುರುಗಳಾಗಿದ್ದ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳವರ ಉಪದೇಶಗಳು ಮತ್ತು ಕೃತಿಗಳಲ್ಲಿ ಹಲವೆಡೆ ಚದುರಿಹೋಗಿದ್ದು, ಅವನ್ನು ಆಯ್ದು ಈ ಕೃತಿಯಲ್ಲಿ ವಿವರಿಸಲಾಗಿದೆ. ನಮ್ಮ ಧರ್ಮ ಹೇಗೆ ಅನುಷ್ಠಾನಧರ್ಮವಾಗಿದೆ, ಇಚ್ಛಾನಿಗ್ರಹದಿಂದ ನಮ್ಮ ಸಂಕೀರ್ಣ ಸ್ವಭಾವವನ್ನು ಹೇಗೆ ಹತೋಟಿಯಲ್ಲಿಟ್ಟುಕೊಂಡು ಅದನ್ನು ಸದುಪಯೋಗಪಡಿಸಿಕೊಳ್ಳಬಹುದು, ಜೀವನದಲ್ಲಿ ನಮ್ಮ ಹೊಣೆಗಾರಿಕೆ ಎಂತಹುದು, ಕರ್ಮವಾದದ ಆವಶ್ಯಕತೆ, ಜ್ಞಾನಾರ್ಜನೆಯು ಪರಮತತ್ತ್ವವನ್ನು ಅರಿಯಲು ಹೇಗೆ ಸಹಾಯಮಾಡುತ್ತದೆ, ಈ ಮೊದಲಾದ ಮಾರ್ಗದರ್ಶಿ ಸೂತ್ರಗಳನ್ನುವಿವರಿಸಲಾಗಿದೆ. ಈ ಕೃತಿಯನ್ನು ಹುರಗಲವಾಡಿ ಲಕ್ಷ್ಮೀನರಸಿಂಹ ಶಾಸ್ತ್ರೀ ಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

About the Author

ಲಕ್ಷ್ಮೀನರಸಿಂಹಶಾಸ್ತ್ರಿ ಹುರಗಲವಾಡಿ
(12 May 1929)

ಲ.ನ.ಶಾಸ್ತ್ರಿ ಎಂತಲೇ ಪರಿಚಿತರಾಗಿರುವ ಕವಿ, ಕಾದಂಬರಿಕಾರ, ಧಾರ್ಮಿಕ ಸಾಹಿತ್ಯ ರಚನಕಾರರಾದ ಲಕ್ಷ್ಮೀನರಸಿಂಹಶಾಸ್ತ್ರಿ ಹುರಗಲವಾಡಿ ಅವರು ಜನಿಸಿದ್ದು 1929 ಮೇ 12ರಂದು. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿಮ ಹುರುಗಲವಾಡಿ ಇವರ ಹುಟ್ಟೂರು. ಮಂಡ್ಯದಲ್ಲಿಯೇ ಇಂಟರ್‌ ಮೀಡಿಯೇಟ್‌ ಶಿಕ್ಷಣ ಪಡೆದ ಇವರು ಅಂಚೆ ಇಲಾಖೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು.  ಇವರ ಪ್ರಮುಖ ಕೃತಿಗಳೆಂದರೆ ಪೂರ್ವರಾಗ (ಕವಿತಾಸಂಕಲನ), ರಸಾಗೌತಮಿ, ಊರ್ವಶಿ (ಕಥನಕವನಗಳು), ಮಾರೀಚ (ನಾಟಕ), ಧರೆಗಿಳಿದ ದಿವ್ಯತೇಜ (ಕಾದಂಬರಿ), ಶ್ರೀ ಜಗದ್ಗುರು (ಸಂಪಾದನೆ), ಸಂಭಾಷಣ ತರಂಗಿಣಿ, ಶ್ರೀ ಸಚ್ಚಿದಾನಂದ ಭಾರತಿ (ಜೀವನಚರಿತ್ರೆಗಳು), ಅಳಸಿಂಗ ಪೆರುಮಾಳ್ ಇತ್ಯಾದಿ. ...

READ MORE

Related Books