ವೇದಾಂತವನ್ನು ಬದುಕಬೇಕು, ಅದು ಕಾರ್ಯ ಶೀಲವಾಗಿರಬೇಕು ಎಂದು ಸಾರುತ್ತಿದ್ದ ಮಹಾ ತೇಜಸ್ವಿ ಸಂತ ಸ್ವಾಮಿ ರಾಮತೀರ್ಥರ ಉಪದೇಶಗಳ ತಿರುಳನ್ನು ಈ ಕೃತಿಯು ನಮಗೆ ವಿವರಿಸುತ್ತದೆ. ಕಾಯಕ ಸಿದ್ಧಾಂತದ ಹಲವು ಮಜಲುಗಳಾದ ಆತ್ಮಸಮರ್ಪಣೆ, ಪ್ರಸನ್ನಚಿತ್ತತೆ, ಸ್ವಾವಲಂಬನೆ, ಪ್ರೇಮ, ಇವುಗಳನ್ನು ಸರಳವಾಗಿ ಸ್ವಾಮಿ ರಾಮತೀರ್ಥರು ವಿವರಿಸುತ್ತಾರೆ. ಈ ಕೃತಿಯನ್ನು ನಯನಾ ಕಾಶ್ಯಪ್ ರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಗಣಿತಶಾಸ್ತ್ರದ ಬಗ್ಗೆ ಹೇಳುವ ಗಣಿತಶಾಸ್ತ್ರವು ಧರ್ಮಕ್ಕೆ ಆಸರೆಯಾಗುತ್ತದೆ. ನಮಗೆ ಐಹಿಕ ಜೀವನದಲ್ಲಿ ಏಕಾಗ್ರತೆಯನ್ನು ಬೆಳೆಸುತ್ತದೆ ಎಂಬ ಮಾತು ಬಹು ಮೌಲಿಕವಾದುದು. ಜನಸಂಖ್ಯೆ, ಮಹಿಳಾಶಿಕ್ಷಣ, ರಾಷ್ಟ್ರಧರ್ಮ, ಭಾರತದ ಭವಿಷ್ಯ ಈ ಸಂಗತಿಗಳ ಕುರಿತು ವಿವರಗಳನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.