ಈ ಚಿಕ್ಕ ಕೃತಿಯಲ್ಲಿ ಶ್ರೀ ವಿ.ಎ.ಕೆ. ಅಯ್ಯರ್ ಅವರು ಹಿಂದೂ ಧಾರ್ಮಿಕ ಗ್ರಂಥಗಳ ಆಧಾರಗಳು ಮತ್ತು ಸಂಸ್ಕಾರಗಳನ್ನು ಕುರಿತಾದ ಉತ್ತಮವಾದ ಹಾಗೂ ಉಪಯುಕ್ತವಾದ ಮಾಹಿತಿಗಳನ್ನು ನೀಡಿದ್ದಾರೆ. ಹಿಂದೂ ಧರ್ಮದ ಪ್ರಮುಖ ಅಧಿಕೃತ ಗಂಥಗಳನ್ನು ಇಲ್ಲಿ ಅವರು ಉದಾಹರಿಸಿದ್ದಾರೆ. ಅಲ್ಲದೆ, ಹಿಂದೂ ಸಂಸ್ಕಾರಗಳನ್ನು ಆಧ್ಯಯನ ಮಾಡಿ, ಜನ್ಮಪೂರ್ವ, ಹಾಗೂ ಜನನ ನಂತರದ ಎಲ್ಲಾ ಸಂಸ್ಕಾರಗಳನ್ನೂಸ್ಪಷ್ಟವಾಗಿ ವಿವರಿಸಿದ್ದಾರೆ. ಅಷ್ಟೇ ಅಲ್ಲದೆ ವೇದಗಳು, ಅವುಗಳ ಶಾಖೆಗಳು, ಕ್ರಮವಾಗಿ ಪ್ರತಿಯೊಂದು ವೇದಕ್ಕೂ ಸೇರಿದ ಬ್ರಾಹ್ಮಣಗಳು, ಆರಣ್ಯಕಗಳು, ಉಪನಿಷತ್ತುಗಳು, ಶ್ರೌತ, ಗೃಹ್ಯ, ಹಾಗೂ ಧರ್ಮಸೂತ್ರಗಳು ಮತ್ತು ಉಪವೇದಗಳು ಇವುಗಳ ಪಟ್ಟಿಯನ್ನು ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ಈ ಕೃತಿಯನ್ನು ಎಚ್.ಎಲ್.ಚಂದ್ರಶೇಖರ್ ರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
©2025 Book Brahma Private Limited.