`ಗಡಿಯಾಚೆಯ ಗುಡಿಗಳು' ಇತಿಹಾಸ ಬರಹದ ಪುಸ್ತಕವನ್ನು ಲೇಖಕ ಡಾ. ಲೋಕೇಶಚಂದ್ರ ರಚಿಸಿದ್ದು, ಈ ಪುಸ್ತಕದ ಕನ್ನಡನುವಾದವನ್ನು ಎನ್.ಪಿ. ಶಂಕರನಾರಾಯಣ ಅವರು ಮಾಡಿದ್ದಾರೆ. ಭಾರತೀಯ ಸಂಸ್ಕೃತಿ ಏಷ್ಯಾದ ಮಾತೃಸಂಸ್ಕೃತಿ. ಭಾರತದ ಗಡಿಯ ಆಚೆ ಭಾರತೀಯರು ಕಟ್ಟಿ ಬೆಳೆಸಿದ ಭಾರತೀಯ ಸಂಸ್ಕೃತಿಯ ಕುರುಹುಗಳು ಇಂದಿಗೂ ಜೀವಂತ. ನೀರ್ಗಲ್ಲಿನ ಸೈಬೀರಿಯಾ, ಉದಯ ಸೂರ್ಯನ ನಾಡು ಜಪಾನ್, ಸಸ್ಯ ಶ್ಯಾಮಲ ಇಂಡೋನೇಷಿಯಾ, ಜೀವಂತ ಭಾರತ ಥಾಯ್‌ಲೆಂಡ್, ದೇವಭೂಮಿ ಟಿಬೆಟ್‌ಗಳಲ್ಲಿ ಭವ್ಯೋನ್ನತವಾಗಿ ಕಂಗೊಳಿಸುವ ನಮ್ಮ ಸಂಸ್ಕೃತಿಯ ಅವಲೋಕನದ ಪುಸ್ತಕ ರೂಪವೇ ’ಗಡಿಯಾಚೆಯ ಗುಡಿಗಳು’ ಎಂದು ಈ ಕೃತಿಯ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.
©2025 Book Brahma Private Limited.