ಮಹಾರಾಷ್ಟ್ರದಲ್ಲಿ ಜನ್ಮ ತಾಳಿದ ಹಲವು ಅತ್ಯುನ್ನತ ಸಂತರಲ್ಲಿ ತುಕಾರಾಮರ ಕೂಡ ಒಬ್ಬರು. ಅವರ ಜೀವನ, ಆಶಯ, ಹೋರಾಟ, ಅವರಲ್ಲಿ ಸಂತತ್ವದ ವಿಕಸನ, ಅವರು ತುಳಿದ ಜ್ಞಾನೋದಯದ ಪಥ, ಅವರ ಧರ್ಮ, ಆಧ್ಯಾತ್ಮಯೋಗ, ಸಾಧನೆ ಮತ್ತು ಚರಿತ್ರೆಯಲ್ಲಿ ಹಾಗೂ ಜನತೆಯ ಜೀವನದಲ್ಲಿ ಅವರ ಪ್ರಭಾವ ಇವುಗಳನ್ನು ಇಲ್ಲಿ ಶ್ರೀ ಎಸ್. ಆರ್. ಶರ್ಮ ಅವರು ವಿವರಿಸಿದ್ದಾರೆ. ಈ ಕೃತಿಯನ್ನು ಡಿ.ಎನ್.ವೀಣಾ ರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಜ್ಞಾನ ದೇವರು ಕಟ್ಟಲು ಉದ್ಯುಗಿಸಿದ ಭವ್ಯ ಕಟ್ಟಡದ ಕಲಶವಾದರು ತುಕಾರಾಮರು ಎಂಬ ಮಾತು ಇಲ್ಲಿ ಸಾರ್ಥಕವಾಗಿ ಮೂಡಿಬಂದಿದೆ. ಅಸಹನೆಯ ಮೂರ್ತಿಯಾಗಿದ್ದ ತಮ್ಮ ಹೆಂಡತಿ ಹಾಗೂ ಪ್ರತಿಕೂಲವಾಗಿದ್ದ ಪರಿಸ್ಥಿತಿಗಳಲ್ಲಿಯೂ ತುಕಾರಾಮರು ಹೇಗೆ ತಮ್ಮ ಸಾಧನೆಯನ್ನು ಮುಂದುವರಿಸಿದರು ಎಂಬುದನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2025 Book Brahma Private Limited.