ನಾನು ಯಾಕೆ ಹಿಂದೂ?

Author : ಕೆ.ಈ. ರಾಧಾಕೃಷ್ಣ

Pages 404

₹ 550.00




Year of Publication: 2023
Published by: ಮನೋಹರ ಗ್ರಂಥಮಾಲಾ
Address: ಲಕ್ಷ್ಮಿಭವನ, ಸುಭಾಷ್ ರಸ್ತೆ, ಧಾರವಾಡ - 580001.
Phone: +91 9845447002 / 0836-2441822

Synopsys

‘ನಾನು ಯಾಕೆ ಹಿಂದೂ?’ ಶಶಿ ತರೂರ್ ಅವರ ಇಂಗ್ಲೀಷ್ ಕೃತಿಯನ್ನು ಪ್ರೊ. ಕೆ. ಈ ರಾಧಾಕೃಷ್ಣ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತದ ಹೆಸರಾಂತ ಸಾರ್ವಜನಿಕ ಚಿಂತಕರಲ್ಲಿ ಒಬ್ಬರಾದ ಶಶಿ ತರೂರು ಜಗತ್ತಿನ ಅತ್ಯಂತ ಶ್ರೇಷ್ಠ ಮತ್ತು ಪ್ರಾಚೀನ ಧರ್ಮದ ಬಗ್ಗೆ, ಬರೆದ ಪುಸ್ತಕ Why I am Hindu? - ನಾನೇಕೆ ಹಿಂದು..? ಹಿಂದೂ ಧರ್ಮದ ವಿಸ್ತಾರ, ಎತ್ತರ ಮತ್ತು ಅಗಾಧತೆಯನ್ನು ಅನೇಕ ಆಯಾಮಗಳ ಸೂಕ್ಷ್ಮ ಈ ಪುಸ್ತಕ ಸೆರೆ ಹಿಡಿದಿಡುತ್ತದೆ ಎಂದಿದ್ದಾರೆ ಅನುವಾದಕ ಕೆ.ಈ. ರಾಧಾಕೃಷ್ಣ. ಜೊತೆಗೆ ಹಿಂದೂ ಧರ್ಮಕ್ಕೆ ಅನನ್ಯ ಕಾಣಿಕೆ ನೀಡಿದ ಮಹಾನ್ ಚೇತನಗಳಾದ ಆದಿ ಶಂಕರ, ಪತಂಜಲಿ, ರಾಮಾನುಜ, ಸ್ವಾಮಿ ವಿವೇಕನಂದ, ರಾಮಕೃಷ್ಣ ಪರಮಹಂಸ ಮತ್ತು ಅನೇಕರ ಬಗ್ಗೆ ಈ ಪುಸ್ತಕ ಉಲ್ಲೇಖಿಸುತ್ತದೆ. ಪುರುಷಾರ್ಥಗಳು ಮತ್ತು ಭಕ್ತಿಯ ನೆಲೆಯಲ್ಲಿ ನಿಂತಿರುವ ಹಿಂದೂಧರ್ಮದ ತಾತ್ವಿಕತೆಯನ್ನು, ಭಗವದ್ಗೀತೆಯ ಮತ್ತು ವಿವೇಕಾನಂದರು ಉಪದೇಶಿಸಿದ ಸರ್ವಧರ್ಮೀಯ ಒಗ್ಗೂಡುವಿಕೆಯ ಹಿಂದೂಧರ್ಮದ ಬಗ್ಗೆ ಮತ್ತು ಹಿಂದೂ ಆಚರಣೆಗಳ ಬಗ್ಗೆ ಸಾಮಾನ್ಯ ಜನರು ನಂಬುವ ಸರಳ ಮತ್ತು ಸುಲಭವಾದ ಭಾಷೆಯಲ್ಲಿ ತರೂರ್ ವಿವರಿಸುತ್ತಾರೆ. ವರ್ತಮಾನ ಕಾಲದಲ್ಲಿ ಬಲಪಂಥೀಯ ಸಂಘಟನೆಗಳು ಮತ್ತು ಅದರ ಪರಿಚಾರಕರಿಂದ, ಧರ್ಮದ ಹೆಸರಿನಲ್ಲಿ ಸಂಭವಿಸಿದ ಹಿಂಸಾತ್ಮಕ ಘಟನೆಗಳನ್ನು, ಅದರ ಸಂಕೀರ್ಣ ಮತ್ತು ಅನೇಕ ಅಭಿವ್ಯಕ್ತಿಗಳನ್ನು ಅವರು ವಿಮರ್ಶೆಗೆ ಒಳಪಡಿಸುತ್ತಾರೆ. ಹಿಂದುತ್ವದ ಬಗ್ಗೆ ಆಳವಾಗಿ ವಿಶ್ಲೇಷಿಸಿ, ಅದರ ಗಮನಾರ್ಹ ಸೈದ್ಧಾಂತಿಕರಾದ ದೀನದಯಾಳ ಉಪಾಧ್ಯಾಯರ ಸಿದ್ಧಾಂತವನ್ನು ವಿವರಿಸುತ್ತಾರೆ. ಹಿಂದುತ್ವದ ತೀವ್ರವಾದಿ ಭಕ್ತರನ್ನು ನೇರವಾಗಿ ಟೀಕಿಸುತ್ತಲೇ ಭಾರತವನ್ನು ಜಗತ್ತಿನಲ್ಲೇ ಶ್ರೇಷ್ಠವೆಂದು ಗುರುತಿಸಿರುವ ವಿಭಿನ್ನ, ವಿಶಿಷ್ಟ ಸಂಸ್ಕೃತಿಯನ್ನು ಧಾರ್ಮಿಕ ಮತಾಂಧವಾದ ಸರ್ವನಾಶ ಮಾಡುತ್ತದೆ ಎನ್ನುವುದರ ಬಗ್ಗೆ ದ್ವಂದ್ವಾತೀತ ಧ್ವನಿಯಿಂದ ಖಂಡಿಸುತ್ತಾರೆ. ಆದರೆ, ಭಾರತ ಬಹುಮುಖೀ ಮತ್ತು ಧರ್ಮನಿರ್ಲಿಪ್ತ ರಾಷ್ಟ್ರವಾಗಿ ಉಳಿದುಕೊಂಡಿರುವುದೂ, ಹಿಂದೂ ಧರ್ಮದಿಂದಲೇ ಎಂದೂ ಅವರು ದಾಖಲಿಸುತ್ತಾರೆ. ವರ್ತಮಾನ ಮತ್ತು ಭವಿಷ್ಯದ ಕಾಲಗಳಲ್ಲೂ ಸಂವಾದ ಮತ್ತು ಚರ್ಚೆಗಳಿಗೆ ಒಳಗಾಗುವ Why I am Hindu?-ನಾನೇಕೆ ಹಿಂದು? ಹಿಂದೂ ಧರ್ಮದ ಚಾರಿತ್ರಿಕತೆ, ವರ್ತಮಾನತೆ ಮತ್ತು ಭವಿಷ್ಯದ ಬಗ್ಗೆ ರಚಿತವಾದ ಸೃಜನಶೀಲ ಶ್ರೇಷ್ಠ ಕೃತಿ ಎಂದಿದ್ದಾರೆ ರಾಧಾಕೃಷ್ಣ.

About the Author

ಕೆ.ಈ. ರಾಧಾಕೃಷ್ಣ
(22 December 1946)

ಪ್ರೊ. ಕೆ.ಈ. ರಾಧಾಕೃಷ್ಣ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪೆರಾಜೆ (ಜನನ: 22-12-1946) ಮೂಲದವರು. ತಂದೆ ಈಶ್ವರಪ್ಪ, ತಾಯಿ ಕಾವೇರಮ್ಮ. ಬೆಂಗಳೂರು ವಿ.ವಿ.ಯಿಂದ ಇಂಗ್ಲಿಷ್ ನಲ್ಲಿ ಎಂ.ಎ. ಹಾಗೂ ಎಲ್.ಎಲ್. ಬಿ.ಪದವೀಧರರು. 1972 ರಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ 1988 ರಲ್ಲಿ ಪ್ರಾಂಶುಪಾಲರಾಗಿ, 2002 ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಯುಜಿಸಿ ಯಲ್ಲಿ ವಿಷಯ ಪರಿಣಿತರ ಸಮಿತಿ ಸದಸ್ಯರಾಗಿದ್ದರು. ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ನೀತಿ ರಚನೆಯ ಸಮಿತಿ ಸದಸ್ಯರಾಗಿದ್ದರು. ಬೆಂಗಳೂರು ವಿ.ವಿ.ಯಲ್ಲಿ ಅಭ್ಯಾಸ ಮಂಡಳಿ, ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಹೀಗೆ ವಿವಿಧ ವಿಭಾಗಗಳಲ್ಲಿ ...

READ MORE

Related Books