ಶ್ರೀ ಚಂದ್ರ ಶೇಖರೇಂದ್ರ ಸರಸ್ವತಿಯವರು ತಮಿಳಿನಲ್ಲಿ ಮಾಡಿದ ಭಾಷಣಗಳನ್ನು, ಬಿ.ಎಸ್. ರುಕ್ಕಮ್ಮರವರು ಕನ್ನಡಕ್ಕೆ ಅನುವಾದಿಸಿ ಕೃತಿಯನ್ನು ರಚಿಸಿದ್ದಾರೆ. ಸ್ವಾಮಿಗಳು ಸನಾತನ ಧರ್ಮ, ಅದರ ಅನಾದಿತ್ವ, ಅದು ಹೇಗೆ ಯಾವುದೇ ಸಂಕುಚಿತತೆಯನ್ನೂ ಒಳಗೊಳ್ಳದೆ ವಿಶ್ವಧರ್ಮವಾಗಿದೆ ಎಂಬುದನ್ನು ವಿವರಿಸುತ್ತಾರೆ. ವೇದಗಳ ಸಾರವನ್ನು ನಮಗೆ ನೀಡುತ್ತಾರೆ. ಅಧ್ಯಾತ್ಮದ ಹಾದಿಯಲ್ಲಿ ಕರ್ಮಾನುಷ್ಠಾನ, ದೈವಭಕ್ತಿ, ಜ್ಞಾನಸಂಪಾದನೆಗಳ ಪಾತ್ರವನ್ನು ವಿವರಿಸುತ್ತಾರೆ. ಭಗವದ್ಗೀತೆಯ ಬಗೆಗೂ ಸ್ವಾಮಿಗಳು ಸರಳವಾಗಿ ವ್ಯಾಖ್ಯಾನವನ್ನು ಮಾಡಿದ್ದಾರೆ. ವೈದಿಕ ಧರ್ಮವು ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ ಅವಿಚ್ಛಿನ್ನವಾಗಿ ಉಳಿದು ಬರಲು ನಮ್ಮ ಧರ್ಮ ಪ್ರವರ್ತಕರು ಹೇಗೆ ಸಹಾಯಕರಾಗಿದ್ದಾರೆ ಎಂಬುದನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.