‘ಮುಚ್ಚುಮರೆ ಇಲ್ಲದೇ ಎಲ್ಲವನ್ನೂ ಬಿಚ್ಚಿಡುವೆ’ ಎಂಬ ಉಪಶೀರ್ಷಿಕೆಯೊಂದಿಗೆ ಪ್ರಕಟವಾದ ಕೃತಿ ‘ಗಂಡು ಜೀವ ಹೆಣ್ಣು ಭಾವ’ . ಮಾನವಿ ಬಂದೋಪಾಧ್ಯಯ ಅವರು ಭಾರತದ ಪ್ರಪ್ರಥಮ ಟ್ರಾನ್ಸ್ ಜೆಂಡರ್. ಪ್ರಿನ್ಸಿಪಾಲರ ಸಾದಾಸೀದಾ ಕತೆ ಎಂಬ ಪ್ರವೇಶದ ಪರಿಚಯದೊಂದಿಗೆ ಕೃತಿಯ ಸ್ವರೂಪದ ಸೂಚನೆಯೂ ಆಗಿದೆ.
ಅನುವಾದಕ ಬಿ.ಎಸ್. ಜಯಪ್ರಕಾಶ ನಾರಾಯಣ ಅವರು ಜೀವನ ಚರಿತ್ರೆಯ ಈ ಕೃತಿಯನ್ನು (ಗಂಡು ಜೀವ, ಹೆಣ್ಣು ಭಾವ) ಅನುವಾದಿಸಿದ್ದಾರೆ. ಈ ತೃತೀಯ ಲಿಂಗಿಯ ಬದುಕನ್ನು, ವೈಚಾರಿಕತೆಯೊಂದಿಗೆ ಸಮಸ್ಯೆಗಳನ್ನು ಎದುರಿಸಿದ ಸಾಧನೆಗಳನ್ನು ಕಟ್ಟಿಕೊಡುವ ಕೃತಿ ಇದು.
`ನಿಜ ಹೇಳಬೇಕೆಂದರೆ, ಮೇಲ್ನೋಟಕ್ಕೆ ಮಾತ್ರ ಎಲ್ಲರ ಬಗ್ಗೆಯೂ ಔದಾರ್ಯವನ್ನು ತೋರಿಸುತ್ತಿರುವ, ಆದರೆ ಆಳದಲ್ಲಿ ನನ್ನಂಥವರ ಬಗ್ಗೆ ಕ್ರೌರ್ಯವನ್ನು ಹೊಂದಿರುವ ನಮ್ಮ ಸಮಾಜದ ನಾಟಕದ ವಿರುದ್ಧ ಇದು ನನ್ನ ಪ್ರತಿಭಟನೆಯಾಗಿತ್ತು' ಎನ್ನುವ ಮಾನವಿ ಬಂದೋಪಾಧ್ಯಯರ ವೈಚಾರಿಕತೆಯು ಈ ಆತ್ಮಕಥನದ ಮೂಲ ವಸ್ತು ಹಾಗೂ ಸಾಗುವ ಹಾದಿಯಲ್ಲಿ ಅದು ಪಡೆಯಬಹುದಾದ ವ್ಯಕ್ತಿತ್ವದ ರೂಪುಗಳನ್ನುಮತ್ತು ಅವುಗಳನ್ನು ಸಮರ್ಥವಾಗಿ ಎದುರಿಸಿದ ಪರಿಗಳನ್ನು ಕಾಣಬಹುದು. ಕಥಾವಸ್ತು, ನಿರೂಪಣಾ ಶೈಲಿ, ವಿಚಾರಗಳ ಪ್ರತಿಪಾದನೆ ದೃಷ್ಟಿಯಿಂದ ಹಾಗೂ ಅನುವಾದದ ಸಮರ್ಥ ಕಲೆಯಿಂದ ಈ ಕೃತಿಯು ಓದುಗರ ಗಮನ ಸೆಳೆಯುತ್ತದೆ.
©2024 Book Brahma Private Limited.