ಎಸ್ ವಿ ಕೃಷ್ಣಮೂರ್ತಿ ರಾವ್ ಅವರ ಅನುವಾದಿತ ಕೃತಿ ಜವಾಹಾರಲಾಲಾ ನೆಹರೂ. ಪಂಡಿತ ಜವಾಹಾರಲಾಲಾ ನೆಹರೂ ಅವರ ಡಿಸ್ಕವರಿ ಆಫ್ ಇಂಡಿಯಾ ಉದ್ಗ್ರಂಥದ (ಎರಡು ಭಾಗಗಳಲ್ಲಿದೆ) ಮೊದಲ ಭಾಗದ ಸರಳ ಅನುವಾದ ಇದು. ಪ್ರಪಂಚದ ಮಹಾನ್ ರಾಜಕಾರಣಿಗಳಲ್ಲಿ ಒಬ್ಬರು, ಸುಸಂಸ್ಕ್ರತ ಭಾವನಾಜೀವಿ,ಧ್ಯೇಯ ನಿಷ್ಠೆಗಳನ್ನು ಮೈ ಗೂಡಿಸಿಕೊಂಡವರೂ ಆದ ಜವಾಹರರ ಫ್ರೌಢ ಇಂಗ್ಲೀಶ್ ಶೈಲಿ ಹಲವು ಓದುಗರಿಗೆ ಅಡ್ಡಿಯಾಗಿರಲಿಕ್ಕೂ ಸಾಕು.ಕೃಷ್ಣಮೂರ್ತಿರಾವ್ ಅವರ ಈ ಅನುವಾದ ಇದನ್ನು ಪರಿಹರಿಸಿ, ಭಾರತದ ಇತಿಹಾಸ, ಸಾಹಿತ್ಯ ಕಲೆ ಮತ್ತು ಸಂಸ್ಕೃತಿಗಳ ಮೇಲೆ ಹೊಸ ಬೆಳಕನ್ನು ಚೆಲ್ಲಿದ ನೆಹರೂ ವಿಚಾರಧಾರೆಯನ್ನು ಕನ್ನಡ ಓದುಗರಿಗೆ ಪರಿಚಯಿಸಿ ಕೊಟ್ಟಿದೆ. ತುಸು ತುಸುವೇ ಸವಿದು ಓದುವುದನ್ನು ಕಡ್ಡಾಯ ಮಾಡಿಕೊಂಡರೆ ಸಾಕು, ಅಷ್ಟರಮಟ್ಟಿಗೆ ಓದುಗರ ಪ್ರಜ್ಞೆ ವಿಸ್ತರಿಸುತ್ತದೆ; ನೆಹರೂ ಆ ನಂತರ ತಮ್ಮ ವಿಚಾರಗಳನ್ನು ಪುನರಾವಲೋಕಿಸಿಕೊಂಡಿದ್ದರೂ.
©2024 Book Brahma Private Limited.