ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಸರಳಗನ್ನಡದಲ್ಲಿ

Author : ಮಧುಸೂದನ ವೈ.ಎನ್‌

Pages 120

₹ 170.00




Year of Publication: 2024
Published by: ಅಮೂಲ್ಯ ಪುಸ್ತಕ
Address: #83/1, 15ನೆಯ ಮುಖ್ಯರಸ್ತೆ, (ವಿಜಯನಗರ ಕ್ಲಬ್ ಎದುರುರಸ್ತೆ) ವಿಜಯನಗರ, ಬೆಂಗಳೂರು - 560040.
Phone: 9448676770 9620796770

Synopsys

'ಆರ್ಟಿಫೀಶಿಯಲ್ ಇಂಟೆಲಿಜೆನ್ಸ್, ಸರಳಗನ್ನಡದಲ್ಲಿ' ಲೇಖಕ ಮಧು ವೈ.ಎನ್ ಅವರ ತಂತ್ರಜ್ಞಾನದ ಕುರಿತ ವಿಚಾರವನ್ನೊಳಗೊಂಡ ಕೃತಿಯಾಗಿದೆ. 29 ಅಧ್ಯಾಯಗಳ ದಟ್ಟ ಪುಸ್ತಕದ ಕೃತಿಯನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದು ಮೊದಲ ಭಾಗ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್, ಎರಡನೆಯ ಭಾಗ ಇನ್ನಿತರ ತಂತ್ರಜ್ಞಾನ(ವಿಪಿಎನ್, ಫಿಂಗರ್ ಪ್ರಿಂಟ್, ಸ್ಯಾಟಲೈಟ್ ಫೋನ್, ಇ-ಸಿಮ್ ..) ಮತ್ತು ಮೂರನೆಯ ಭಾಗದಲ್ಲಿ ಸಾಫ್ಟ್ ವೇರಿನಲ್ಲಿ ಎದುರಿಸುವ ಆಸಕ್ತಿಕರ ಆರ್ಕಿಟೆಕ್ಚರಲ್ ಸಮಸ್ಯೆಗಳ(ಛಿದ್ರ ಮೆದುಳಿನ ಪ್ರಾಬ್ಲಂ, ಖೈದಿಗಳ ಗೊಂದಲ, ಸೈನ್ಯಾಧಿಕಾರಿಗಳ ಪ್ರಾಬ್ಲಂ...) ವಿವರಣೆಗಳನ್ನು ಒಳಗೊಂಡಿದೆ.

ಕೃತಿಯನ್ನು ಯಾಕೆ ಓದಬೇಕೆಂದರೆ, ಬಹುಪಾಲು ಮಂದಿಗೆ ತಂತ್ರಜ್ಞಾನವೆಂದರೆ ದೂರದ ಬೆಟ್ಟದಂತೆ. ಕೆಲವರಿಗೆ ನುಣ್ಣಗೆ, ಕೆಲವರಿಗೆ ಕರಿಗತ್ತಲ ಘೇಂಡಾಮೃಗ. ಅದು ನುಣ್ಣಗೂ ಇಲ್ಲ, ಘೇಂಡಾಮೃಗವೂ ಅಲ್ಲವೆಂಬ ಅರಿವು ಮೂಡಿಸುವ ಪ್ರಯತ್ನ ಈ ಪುಸ್ತಕದ್ದು. ಕ್ಲಿಷ್ಟವಾದ ತಂತ್ರಜ್ಞಾನ ಸಂಗತಿಗಳನ್ನು ಸುಲಿದ ಬಾಳೆಹಣ್ಣಿನಂತೆ ಪ್ರಸ್ತುತಪಡಿಸಿ ಅದರೆಡೆ ಒಲವು ಮೂಡಿಸುವ ಪ್ರಯತ್ನ. ಹಗಲಿಡೀ ಮೈಮುರಿದು ದುಡಿದು ಇಳಿಸಂಜೆ ಊರ ಮುಂದಿನ ಅರಳಿಕಟ್ಟೆಯ ಮೇಲೆ ವಿರಾಮದಿಂದ ಕುಳಿತಾಗ ಮೂಡುವ ಲೋಕಜ್ಞಾನದ ಸಂವಾದ.

ವಿದ್ಯಾರ್ಥಿಗಳು, ಉದ್ಯೋಗಸ್ಥರು, ಗೃಹಿಣಿಯರು, ಹಿರಿಯರು, ಕಿರಿಯರು, ಟೆಕ್ಕಿಗಳೂ ಕೂಡ ಓದಬೇಕಾದ ಪುಸ್ತಕವಿದು. ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನವೆಂದರೆ ಬೆನ್ನು ತೋರಿಸಿ ಓಡುವರೆಲ್ಲರೂ ಓದಲೇಬೇಕು.

About the Author

ಮಧುಸೂದನ ವೈ.ಎನ್‌

1987ರಲ್ಲಿ, ಜನಿಸಿದ ಮಧುಸೂಧನ್ ವೈ ಎನ್ ಮೂಲತಃ ತುಮಕೂರು ಜಿಲ್ಲೆ ಸಿರಾ ತಾಲೂಕಿನ ಯರಗುಂಟೆ ಗ್ರಾಮದವರು.ತುಮಕೂರಿನ ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ, ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಾನಿಕ್‌ ಆ್ಯಂಡ್‌ ಕಮ್ಯುನಿಕೇಶನ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ, ಬಿಟ್ಸ್ ಪಿಲಾನಿಯಿಂದ ಸಾಫ್ಟ್‌ವೇರ್ ಸಿಸ್ಟಮ್‌ನಲ್ಲಿ ಮಾಸ್ಟರ್ಸ್ ಡಿಗ್ರಿ, 2008ರಲ್ಲಿ ಮೈಸೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗ ಆರಂಭ.  ಸಧ್ಯಕ್ಕೆ ಐಬಿಎಮ್ ಉದ್ಯೋಗಿ, ಬೆಂಗಳೂರಿನಲ್ಲಿ ವಾಸ, ಸಾಹಿತ್ಯದ ಓದು, ವಿಶ್ವ ಸಿನಿಮಾಗಳ ಟೀಕೆಗೆ ಇವರ ಹವ್ಯಾಸ. ಇವರ ಚೊಚ್ಚಲ ಕೃತಿ ಕಾರೇಹಣ್ಣು" ಕಥಾ ಸಂಕಲನವು 2019ರ 'ಈ ಹೊತ್ತಿಗೆ' ಕಥಾ ಸಂಕಲನ ಪ್ರಶಸ್ತಿಗೆ ಭಾಜನವಾಗಿದೆ. 'ಬಹುರೂಪಿ'ಯಿಂದ ಪ್ರಕಟವಾಗುತ್ತಿರುವ `ಫೀಫೋ' ಮಧು ...

READ MORE

Related Books