‘ಅನೇಕಾಂತವಾದ’ ಕೃತಿಯು ನಾ. ವುಜಿರೆ ಅವರ ಜೈನ ಗ್ರಂಥವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಜೈನಧರ್ಮದ ಹೊಳಹುಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಈ ಕೃತಿ ತನ್ನ ಕಾಣ್ಕೆಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದೆ. ಕರ್ಮವನ್ನು ಜಯಿಸಿದ ಜಿನ, ಏಕವ್ಯಕ್ತಿಯಲ್ಲ, ಬದಲಿಗೆ ಸಂಖ್ಯೆಯಲ್ಲಿ ಅನಂತ ಎಂಬುದನ್ನು ಮನವರಿಕೆ ಮಾಡಿಕೊಡುತ್ತಲೇ ಜೈನಧರ್ಮದ ಅಹಿಂಸಾ, ಕ್ಷಮಾಧರ್ಮ ಇತ್ಯಾದಿಗಳನ್ನು ಲೇಖಕರಾದ ನಾ ವುಜಿರೆಯವರು ಸಂಕ್ಷಿಪ್ತವಾಗಿ, ಆದರೆ ಅರ್ಥಪೂರ್ಣವಾಗಿ ಈ ಕೃತಿಯಲ್ಲಿ ಚರ್ಚಿಸಿದ್ದಾರೆ.
©2024 Book Brahma Private Limited.