ಲೇಖಕ ಡಿ.ಎಸ್. ಶ್ರೀನಿವಾಸ ಪ್ರಸಾದ್ ಅವರ ಕೃತಿ-ಸ್ವರ ರಾಗ ಸುಧಾ. ಸಿನಿಮಾ ಸಂಗೀತದ ಕ್ಲಾಸಿಕಲ್ ಟಚ್ ಎಂಬ ಉಪಶೀರ್ಷಿಕೆಯ ಈ ಕೃತಿಯು ಪ್ರಕೃತಿಯ ಲಯ, ಸಂಗೀತದ ಅಸ್ತಿತ್ವ ಕುರಿತು ಹೇಳುತ್ತದೆ. ಪ್ರಣವದಿಂದ ಸೃಷ್ಟಿ, ತಾಂಡವದಿಂದ ಲಯ - ಪ್ರಳಯ. ಇದರಲ್ಲಿನ ನಾದ ನಿನಾದಗಳ ಝೇಂಕಾರಕ್ಕೆ ಸಂಗೀತ ಎಂದು ಕರೆಯಲಾಗಿದೆ. ಅದನ್ನು ಶಾಸ್ತ್ರೀಯವಾಗಿಯೂ ಒಪ್ಪ ಓರಣಗೊಳಿಸಲಾಗಿದೆ. ಶಬ್ದದಲ್ಲಿಯೇ ಮೃದು ಮಧುರ ಆಪ್ತತೆ ಅಥವಾ ಕೇಳಲಾಗದ ಕರ್ಕಶತೆ ನಡುವಿನ ಅಂತರ ಹಾಗೂ ಸಂಗೀತ ಮತ್ತು ಸಿನಿಮಾ ಜಗತ್ತಿನ ಸ್ವರ ಮಾಧುರ್ಯದ ಶಾಸ್ತ್ರೀಯ ಪರಿಚಯವನ್ನೂ ನೀಡುತ್ತದೆ.
©2024 Book Brahma Private Limited.